Advertisement

ಐಸಿಸಿ ತಿಂಗಳ ಆಟಗಾರರ ಯಾದಿಯಲ್ಲಿ ಅಗರ್ವಾಲ್‌

11:58 PM Jan 08, 2022 | Team Udayavani |

ದುಬಾೖ: “ಐಸಿಸಿ ಡಿಸೆಂಬರ್‌ ತಿಂಗಳ ಕ್ರಿಕೆಟಿಗ’ ಪ್ರಶಸ್ತಿಗೆ ಟೀಮ್‌ ಇಂಡಿಯಾ ಆರಂಭಕಾರ ಅಗರ್ವಾಲ್‌, ಆಸ್ಟ್ರೇಲಿಯದ ವೇಗಿ ಮಿಚೆಲ್‌ ಸ್ಟಾರ್ಕ್‌ ಮತ್ತು ಕಿವೀಸ್‌ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಹೆಸರು ಸೂಚಿಸಲ್ಪಟ್ಟಿದೆ.

Advertisement

ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾದ ಡಿಸೆಂಬರ್‌ ತಿಂಗಳ ಟೆಸ್ಟ್‌ ಪಂದ್ಯಗಳಲ್ಲಿ ಅಗರ್ವಾಲ್‌ 69.00 ಸರಾಸರಿಯಲ್ಲಿ 276 ರನ್‌ ಪೇರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧ ಶತಕ ಸೇರಿದೆ.

ಅಜಾಜ್‌ ಪಟೇಲ್‌ ಅವರಂತೂ ಮುಂಬಯಿ ಟೆಸ್ಟ್‌ ಇನ್ನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಿತ್ತು ಇತಿಹಾಸ ನಿರ್ಮಿಸಿದ್ದರು. ಡಿಸೆಂಬರ್‌ನಲ್ಲಿ ಒಂದೇ ಟೆಸ್ಟ್‌ ಆಡಿದ ಪಟೇಲ್‌ ಒಟ್ಟು 14 ವಿಕೆಟ್‌ ಕೆಡವಿದ್ದರು. ಮಿಚೆಲ್‌ ಸ್ಟಾರ್ಕ್‌ ಆ್ಯಶಸ್‌ ಸರಣಿಯ 3 ಪಂದ್ಯಗಳಿಂದ 14 ವಿಕೆಟ್‌ ಜತೆಗೆ 117 ರನ್‌ ಪೇರಿಸಿ ಆಲ್‌ರೌಂಡ್‌ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ:ಟೆನಿಸ್‌: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next