Advertisement

ಜೀವನ ವಿನೂತನಕ್ಕೆ ಮನಸ್ಸು ಪರಿಶುದ್ಧವಾಗಿರಲಿ; ಸಿದ್ಧೇಶ್ವರ ಶ್ರೀ

06:15 PM Jan 05, 2022 | Team Udayavani |

ಜಮಖಂಡಿ: ಪ್ರತಿಯೊಬ್ಬರ ಜೀವನ ವಿನೂತನವಾಗ ಬೇಕಾದರೇ ಮನಸ್ಸು, ಕೈಗಳು ಪರಿಶುದ್ಧವಾಗಿರಬೇಕು. ಪುತ್ಥಳಿ ಅನಾವರಣ ಉದ್ಧೇಶ ಮತ್ತು ಸಂದೇಶ ಪ್ರತಿಯೊಬ್ಬರಿಗೂ ರವಾನೆಯಾಗಲಿದೆ ಎಂದು ವಿಜಯಪುರದ ಸಿದ್ಧೇಶ್ವರ ಶ್ರೀ ಹೇಳಿದರು.

Advertisement

ಬಿದರಿ ಗ್ರಾಮದ ಕುಮಾರೇಶ್ವರ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಹಿರಿಯ ಪತ್ರಕರ್ತ, ಮಾಜಿ ಶಾಸಕ ದಿ| ಬಾಬುರಡ್ಡಿ ತುಂಗಳ ಅವರ ಪುತ್ಥಳಿ ಅನಾವರಣ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಸತ್ಯಪ್ರೇಮಿಯಾಗಿ ಜೀವನ ಸಾಗಿಸಿದರೇ ನಿಗರ್ಸ ಪ್ರೇಮಿಯಾಗಿ ಬದುಕು ಸಾಗಿಸುತ್ತಾನೆ. ದಿ| ಬಾಬುರಡ್ಡಿ ತುಂಗಳ ಅವರು ಹೋರಾಟ, ಬರವಣಿಗೆ ಮೂಲಕ ಮಹತ್ತರ ಕೆಲಸ ಮಾಡಿದ್ದು, ಗುಣಾತ್ಮಕ ಹೋರಾಟದ ಅಂಶಗಳು ಮನುಷ್ಯನಲ್ಲಿರಬೇಕು.
ಜೀವನದಲ್ಲಿ ಮನುಷ್ಯ ಹೆದರಬಾರದು.ನಿರ್ಭಿತಿ ಪಾಠವನ್ನು ಕಲಿಯಬೇಕು ಎಂದರು.

ಬೇಜಾರವೇ ಜೀವನ ಆಗಬಾರದು, ಮನುಷ್ಯ ನೂರು ವರ್ಷ ಬದುಕಿ ಸಾಧನೆ ಮಾಡಬೇಕು. ಒಳ್ಳೆಯದನ್ನು ನೋಡಿ ಬದುಕಬೇಕು. ಬೇಜಾರಕ್ಕೆ ಜೀವನ ಕೆಡಿಸಿಕೊಳ್ಳದೆ ಸ್ವರ್ಗದಂತಿರುವ ಜಗತ್ತಿನಲ್ಲಿ ಶಾಂತಿಯಿಂದ ಜೀವನ ಸಾಗಿಸಬೇಕು. ಜಗತ್ತಿನಲ್ಲಿ ಇನ್ನೊಬ್ಬರ ಕುರಿತು ಅವಹೇಳನ ಮಾಡುವದು ಸರಿಯಲ್ಲ. ಮನುಷ್ಯ ತನ್ನ ಜೀವನದಲ್ಲಿ ಶ್ರೀಮಂತಿಕೆ, ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ನಮಗೆ ದೇಶದ ದಾರ್ಶನಿಕರು, ಸಂತರು ಉತ್ತಮ ಸಂದೇಶ ನೀಡಿದ್ದು,
ಅವುಗಳ ಪರಿಪಾಲನೆ ಮಾಡುವ ಮೂಲಕ ಸುಂದರ ಜೀವನ ಸಾಗಿಸಬೇಕು ಎಂದರು.

ಬಿದರಿ-ಕಲ್ಮಠ ಮತ್ತು ಸವದತ್ತಿಯ ಶಿವಲಿಂಗ ಶ್ರೀ ಮಾತನಾಡಿ, ಆತ್ಮವೇ ಸ್ತತ್ಯವಾಗಿದ್ದು, ಪರಮಾತ್ಮನನ್ನು ಒಲಿಸಿಕೊಳ್ಳಬೇಕು. ತಪ್ಪುಗಳಿಂದ ಜೀವನ ನಡೆಸುವ ವ್ಯಕ್ತಿ ದುಃಖದಲ್ಲಿರುತ್ತಾನೆ. ಇಂದಿನ ಯುವಕರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರು ಭಕ್ತಿ, ಆಧ್ಯಾತ್ಮಿಕ ದಾರಿಯಲ್ಲಿ ಸಾಗಿದರೇ ಜೀವನ ಸುಂದರ ಅಗಲಿದೆ ಎಂದರು.

ಹಿಪ್ಪರಗಿ ಸಂಗಮೇಶಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಮಾತನಾಡಿದರು. ಪತ್ರಕರ್ತ ಎಂ.ಸಿ.ಗೊಂದಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿದ್ಧಮುತ್ತಾ, ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಶ್ರೀ, ಶಾಸಕರಾದ ಆನಂದ ನ್ಯಾಮಗೌಡ, ಹನಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಗದೀಶ ಗುಡಗುಂಟಿ, ಯೋಗಪ್ಪ ಸವದಿ, ಸಿ.ಟಿ.ಉಪಾಧ್ಯೆ, ಲಕ್ಷ್ಮಣ ಉದಪುಡಿ, ಶಶಿಕಾಂತಗೌಡ ಪಾಟೀಲ, ಮಲ್ಲಿಕಾರ್ಜುನ ಹುಲಗಬಾಳಿ, ಸಿದ್ಧರಾಜ ಪೂಜಾರಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next