Advertisement

ಮೇ 27: ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಪಟ್ಲ ಪ್ರಶಸ್ತಿ ಪ್ರದಾನ 

12:54 PM May 06, 2018 | |

ಮಹಾನಗರ: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ನ ಆಶ್ರಯದಲ್ಲಿ ಮೇ 27ರಂದು ಅಡ್ಯಾರ್‌ ಗಾರ್ಡ್‌ನ್‌ನಲ್ಲಿ ನಡೆಯುವ ಯಕ್ಷಧುವ ಪಟ್ಲ ಸಂಭ್ರಮ-2018ರ ಸಾಲಿನ ಪಟ್ಲ ಪ್ರಶಸ್ತಿಗೆ ಛಂದೋಬ್ರಹ್ಮ ಡಾ| ಶಿಮಂತೂರು ನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್ಟ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸ್ತ್ರೀ ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

Advertisement

ಸಮಾರಂಭದಲ್ಲಿ ಕುರಿಯ ಗಣಪತಿ ಶಾಸ್ತ್ರೀ , ಎಂ.ಕೆ. ರಮೇಶ್‌ ಆಚಾರ್ಯ, ಕುತ್ತೂಟ್ಟು ವಾಸು ಶೆಟ್ಟಿ , ಶೀಲಾ ಕೆ. ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಆನಂದ ಶೆಟ್ಟಿ ಐರಬೈಲು, ಪಾರೆಕೋಡಿ ಗಣಪತಿ ಭಟ್‌, ಮಹಾಲಕ್ಷ್ಮೀ ಡಿ. ರಾವ್‌ ಮೊದಲಾದವರನ್ನು ಯಕ್ಷಧ್ರುವ ಕಲಾ ಗೌರವ ನೀಡಿ ಸಮ್ಮಾನಿಸಲಾಗುತ್ತದೆ.

ಸಮಾರಂಭದಲ್ಲಿ ಟ್ರಸ್ಟ್‌ನ ಸದಸ್ಯರು ಮತ್ತು ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ಮತ್ತು ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ಗೌರವಧನ ವಿತರಣೆ ನಡೆಯಲಿದೆ.

ಯಕ್ಷಗಾನ ಹಾಸ್ಯ ವೈಭವದಲ್ಲಿ ಕಾಪಿಕಾಡ್‌ ಭಾಗವತಿಕೆ
ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಖ್ಯಾತ ನಟ ದೇವದಾಸ್‌ ಕಾಪಿಕಾಡ್‌ ಭಾಗವತಿಕೆ ನಡೆಸಲಿದ್ದಾರೆ. ಅದೇ ರೀತಿ ಕುಸೆಲ್ದ ರಸೆ ನವೀನ್‌ ಡಿ. ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌ ಮೊದಲಾದ ಕಲಾವಿದರು ಹಾಸ್ಯ ಕಲಾವಿದರೊಂದಿಗೆ ಬಣ್ಣ ಹಚ್ಚಲಿದ್ದಾರೆ.

ತಾರಾಮೆರುಗು
ಕಾರ್ಯಕ್ರಮದಲ್ಲಿ ಖ್ಯಾತ ಸಿನಿಮಾ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ರಿಷಬ್‌ ಶೆಟ್ಟಿ , ಬಿಗ್‌ಬಾಸ್‌ ಖ್ಯಾತಿಯ ಚಂದನ್‌ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್‌ನ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಅಡ್ಯಾರ್‌ ಪುರುಷೋತ್ತಮ ಭಂಡಾರಿ ತಿಳಿಸಿದ್ದಾರೆ.

Advertisement

ಸಮಾರಂಭದಲ್ಲಿ ಯಕ್ಷಸಪ್ತ ಭಾಗವತಿಕೆ, ಮಹಿಳಾ ಯಕ್ಷಗಾನ, ತಾಳಮದ್ದಳೆ ದುಬಾೖ ಯಕ್ಷಮಿತ್ರರು ತಂಡದಿಂದ ಯಕ್ಷಗಾನ ಪ್ರದರ್ಶನ, ಯಕ್ಷಗಾನ ಹಾಸ್ಯ ವೈಭವ , ಯಕ್ಷಗಾನ ಬಯಲಾಟ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರಗಲಿವೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next