Advertisement

ಮ್ಯಾಕ್ಸ್‌ವೆಲ್ ಗೆ ಕಾಲಿನ ಶಸ್ತ್ರಚಿಕಿತ್ಸೆ: ಆರ್‌ಸಿಬಿ ನಿರ್ದೇಶಕ ಮೈಕ್ ಹೇಳಿದ್ದೇನು?

06:41 PM Nov 16, 2022 | Team Udayavani |

ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಲೀಗ್‌ನ ಮುಂದಿನ ಆವೃತ್ತಿಯ ಮೊದಲು ಅವರ ತಂಡದ ಪ್ರಚಾರಕ್ಕೆ ಸೇರಲು ಫಿಟ್ ಆಗಿ ಮರಳಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಬುಧವಾರ ಹೇಳಿದ್ದಾರೆ.

Advertisement

ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಲು ಮುರಿದುಕೊಂಡ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕ್ರೀಡಾಂಗಣದಿಂದ ದೂರ ಉಳಿದಿದ್ದಾರೆ. ಮ್ಯಾಕ್ಸ್‌ವೆಲ್ ಅವರ ಫೈಬುಲಾ ಮುರಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ವ್ಯಕ್ತಿಯೊಂದಿಗೆ ಹಿತ್ತಲಿನಲ್ಲಿ ಓಡುತ್ತಿದ್ದಾಗ ಜಾರಿಬಿದ್ದು ಮ್ಯಾಕ್ಸ್‌ವೆಲ್‌ ಅವರ ಕಾಲಿಗೆ ಸಿಕ್ಕಿಬಿದ್ದಿದ್ದರಿಂದ ಗಾಯ ಸಂಭವಿಸಿದೆ ಎಂದು ತಿಳಿದುಬಂದಿದೆ.

“ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಕಾಳಜಿ ಇದೆ, ಕಾಲು ನೋವಿನಿಂದ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಅವರು ಐಪಿಎಲ್‌ಗೆ (ಮುಂದಿನ ವರ್ಷ) ಮೊದಲು ಹಿಂತಿರುಗುತ್ತಾರೆ ಎಂಬ ಮಾಹಿತಿ ನಮಗೆ ಇದೆ ಎಂದು ಹೆಸ್ಸನ್ ಬುಧವಾರ ಆರ್‌ಸಿಬಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

ಗಮನಾರ್ಹವಾಗಿ, ಮ್ಯಾಕ್ಸ್‌ವೆಲ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿಲ್ಲ. 19 ಪಂದ್ಯಗಳಲ್ಲಿ, 18 ಇನ್ನಿಂಗ್ಸ್‌ಗಳಲ್ಲಿ 19.68 ಸರಾಸರಿಯಲ್ಲಿ 315 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಹೊರಹೊಮ್ಮಿದೆ, ಅವರ ಅತ್ಯುತ್ತಮ ಸ್ಕೋರ್ 54(ಅಜೇಯ) ಆಗಿದೆ.

ಟಿ20 ವಿಶ್ವಕಪ್ ನಲ್ಲಿ ಅವರು 161.64 ಸ್ಟ್ರೈಕ್ ರೇಟ್ ಮತ್ತು ಒಂದು ಅರ್ಧಶತಕದೊಂದಿಗೆ 39.33 ರ ಸರಾಸರಿಯಲ್ಲಿ 118 ರನ್ ಗಳನ್ನು ಗಳಿಸಿ ತಂಡದ ಪರ ಮೂರು ವಿಕೆಟ್ ಪಡೆದರು. ಸೂಪರ್ 12 ಹಂತದಲ್ಲಿ ಆಸೀಸ್ ಪಂದ್ಯಾವಳಿಯಿಂದ ಹೊರಬಿದ್ದಿತ್ತು.

Advertisement

ಮ್ಯಾಕ್ಸ್‌ವೆಲ್ 2021 ರಲ್ಲಿ ಅವರನ್ನು ಖರೀದಿಸಿದಾಗಿನಿಂದ ಆರ್‌ಸಿಬಿ ಯ ಪ್ರಮುಖ ಆಟಗಾರರಲ್ಲಿ ಒಬ್ಬರು. ತಂಡಕ್ಕಾಗಿ ಅವರ 28 ಪಂದ್ಯಗಳಲ್ಲಿ, ಅವರು ಏಳು ಅರ್ಧಶತಕಗಳೊಂದಿಗೆ 33.91 ಸರಾಸರಿಯಲ್ಲಿ 814 ರನ್ ಗಳಿಸಿದ್ದಾರೆ. ತಂಡದ ಪರ ಒಂಬತ್ತು ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

ಆರ್‌ಸಿಬಿ ಜೊತೆಗಿನ ಅವರ 2021 ರಲ್ಲಿ ಅವರು 15 ಪಂದ್ಯಗಳಲ್ಲಿ 42.75 ರ ಸರಾಸರಿಯಲ್ಲಿ ಆರು ಅರ್ಧ ಶತಕಗಳೊಂದಿಗೆ 513 ರನ್ ಗಳನ್ನು ಗಳಿಸಿದರು. ಆ ಋತುವಿನಲ್ಲಿ ಅವರು ಮೂರು ವಿಕೆಟ್‌ಗಳನ್ನು ಪಡೆದರು. ಅಂಕಿಅಂಶಗಳ ಪ್ರಕಾರ, ಇದು ಅವರ ಅತ್ಯುತ್ತಮ ಐಪಿಎಲ್ ಪ್ರದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next