Advertisement

ಏಪ್ರಿಲ್‌-ಮೇನಲ್ಲೇ ಗರಿಷ್ಠ ಸಾವಿನ ಪ್ರಕರಣ

06:56 PM Jul 26, 2021 | Team Udayavani |

ನವದೆಹಲಿ: ದೇಶದಲ್ಲಿ ಇದುವರೆಗೆ ಕೊರೊನಾದಿಂದ ಸಂಭವಿಸಿದ ಸಾವುಗಳ ಅರ್ಧದಷ್ಟು ಪ್ರಕರಣಗಳು ಏಪ್ರಿಲ್‌ -ಮೇನಲ್ಲಿಯೇ ದೃಢಪಟ್ಟಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವರದಿಯಲ್ಲೇ ಉಲ್ಲೇಖಿಸಲಾಗಿದೆ.

Advertisement

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಿಂದ ಈ ಅವಧಿಯಲ್ಲಿ ದೇಶದಲ್ಲಿ ದೃಢಪಟ್ಟ ಹತ್ತು ಸಾವುಗಳ ಪೈಕಿ 4 ಈ ರಾಜ್ಯಗಳಿಂದಲೇ ವರದಿಯಾಗಿದೆ. ಹೀಗಾಗಿ, ಆ ಎರಡು ತಿಂಗಳು ಎಷ್ಟು ಭಯಾನಕವಾಗಿದ್ದವು ಎಂಬುದನ್ನು ತೋರಿಸಿದೆ. ಮೂರು ರಾಜ್ಯಗಳು ಏಪ್ರಿಲ್‌-ಮೇನಲ್ಲಿ ಶೇ.41ರಷ್ಟು ಸಾವಿನ ಪ್ರಕರಣಗಳನ್ನು ದಾಖಲಿಸಿವೆ.

2020ರ ಏಪ್ರಿಲ್‌ ಮತ್ತು 2021ರ ಮೇ ಅವಧಿಯಲ್ಲಿ 3,29,065 ಸೋಂಕಿನಿಂದ ಸಾವು ಉಂಟಾಗಿದೆ. 1,66,632 ಸಾವಿನ ಪ್ರಕರಣಗಳು ಈ ಅವಧಿಯಲ್ಲಿಯೇ ದೃಢಪಟ್ಟಿವೆ ಎಂದು ಕೇಂದ್ರ ಹೇಳಿದೆ. ಇದೇ ವೇಳೆ, ಕೇರಳದಲ್ಲಿ ಭಾನುವಾರ ಒಂದೇ ದಿನ 17,466 ಹೊಸ ಪ್ರಕರಣಗಳು ದೃಢಪಟ್ಟಿವೆ. 66 ಮಂದಿ ಸೋಂಕಿನಿಂದ ಸಾವಿ ಗೀಡಾಗಿದ್ದಾರೆ. ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.12 ಆಗಿದೆ. ಜು.24  ರಂದು ಅದು ಶೇ.11.91ಕ್ಕೆ ಇಳಿಕೆಯಾಗಿತ್ತು.

ಇನ್ನೊಂದೆಡೆ, ಶನಿವಾರದಿಂದ ಭಾನುವಾರದ ಅವಧಿಯಲ್ಲಿ ದೇಶದಲ್ಲಿ 39,742 ಸೋಂಕು ಪ್ರಕರಣ ಮತ್ತು 535 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಪ್ರಕರಣ 4,08,212ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ 97.36% ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next