Advertisement

ಮ್ಯಾಕ್ಸ್ ಲೈಫ್ ಜೊತೆ ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಒಪ್ಪಂದ

09:33 PM Mar 06, 2023 | |

ನವದೆಹಲಿ: ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ ಗ್ರಾಹಕರಿಗೆ ಸಮಗ್ರವಾದ ಜೀವ ವಿಮಾ ಸೇವೆಗಳನ್ನು ಒದಗಿಸಲು, ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದೆ.

Advertisement

ಈ ಪಾಲುದಾರಿಕೆ ಒಪ್ಪಂದದ ಮೂಲಕ ಮ್ಯಾಕ್ಸ್ ಲೈಫ್ ಹಾಗೂ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಒಟ್ಟಾಗಿ, ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನ 73 ಲಕ್ಷಕ್ಕೂ ಹೆಚ್ಚಿನ ಗ್ರಾಹಕರಿಗೆ ಹಲವು ಬಗೆಯ ಹಣಕಾಸಿನ ಉಳಿತಾಯ, ರಕ್ಷಣೆ, ನಿವೃತ್ತಿ ಹಾಗೂ ಸಮೂಹ ಜೀವ ವಿಮಾ ಯೋಜನೆಗಳನ್ನು ಒದಗಿಸಲಿವೆ.

2017ರಲ್ಲಿ ಆರಂಭ ಆದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ದೇಶದ ಮುಂಚೂಣಿ ಕಿರು ಹಣಕಾಸು ಬ್ಯಾಂಕ್‌ಗಳ ಪೈಕಿ ಒಂದಾಗಿದೆ. ಈ ಬ್ಯಾಂಕ್ ದೇಶದ 254 ಜಿಲ್ಲೆಗಳಲ್ಲಿ ಒಟ್ಟು 606 ಶಾಖೆಗಳನ್ನು ಹೊಂದಿದೆ. ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇವು ಹರಡಿಕೊಂಡಿವೆ.

ಮ್ಯಾಕ್ಸ್ ಲೈಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪ್ರಶಾಂತ್ ತ್ರಿಪಾಠಿ ಮಾತನಾಡಿ, ಸುಸ್ಥಿರ ಬೆಳವಣಿಗೆಗೆ ಬ್ಯಾಂಕ್ ಜೊತೆ ಪಾಲುದಾರಿಕೆ ಮಾಡಿಕೊಳ್ಳುವುದಕ್ಕೆ ಮ್ಯಾಕ್ಸ್ ಲೈಫ್ ಗಮನ ನೀಡಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಹಣಕಾಸಿನ ಸೇವೆಗಳು ಹಾಗೂ ಜೀವ ವಿಮೆಯ ಭದ್ರತೆಯನ್ನು ಕಲ್ಪಿಸುವ ಪಯಣದಲ್ಲಿ ನಾವು ಉಜ್ಜೀವನ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗೆ ಸ್ವಾಗತ ಕೋರುತ್ತಿದ್ದೇವೆ. ಈ ಪಾಲುದಾರಿಕೆಯು, ಮ್ಯಾಕ್ಸ್ ಲೈಫ್ ಬ್ಯಾಂಕ್ ಗಳ ಮೂಲಕ ನಡೆಸುವ ವಿಮಾ ವಹಿವಾಟುಗಳನ್ನು ಇನ್ನಷ್ಟು ಬಲಪಡಿಸಲಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next