ಅಯೋಧ್ಯೆ (ಯುಪಿ): ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್‌ಸಿಂಗ್ ರೂಪನ್ ಅವರು ಸೋಮವಾರ ದೇವಾಲಯದ ಪಟ್ಟಣ ಅಯೋಧ್ಯೆಗೆ ಭೇಟಿ ನೀಡಿದರು.
Advertisement
ರೂಪನ್ ಅವರು ಪತ್ನಿ ಸಂಯುಕ್ತಾ ರೂಪುನ್ ಮತ್ತು ತನ್ನ ದೇಶದ ಅಧಿಕಾರಿಗಳೊಂದಿಗೆ ಬೆಳಗ್ಗೆ 9 ಗಂಟೆಗೆ ಲಕ್ನೋದಿಂದ ರಸ್ತೆ ಮಾರ್ಗವಾಗಿ ಇಲ್ಲಿಗೆ ಬಂದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಯೋಗವು ಹನುಮಾನ್ ಗರ್ಹಿ ದೇವಸ್ಥಾನ, ಪ್ರಸಿದ್ಧ ಕನಕ ಭವನ ದೇವಸ್ಥಾನ ಮತ್ತು ನಿರ್ಮಾಣ ಹಂತದಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿತು.ರಾಮ ಜನ್ಮಭೂಮಿಯಲ್ಲಿ, ದೇವಾಲಯದ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ರೂಪನ್ ಅವರಿಗೆ ತಿಳಿಸಲಾಯಿತು,ಅವರು ಸರಯು ನದಿಯ ದಡಕ್ಕೂ ಭೇಟಿ ನೀಡಿದರು ಎಂದು ಅಧಿಕಾರಿ ಹೇಳಿದರು.