ಅಲಹಾಬಾದ್: ಮೌನಿ ಅಮಾವಾಸ್ಯೆಯ ಪವಿತ್ರ ದಿನವಾದ ಮಂಗಳವಾರ ಮಧ್ಯಾಹ್ನದ ವರೆಗಿನ ಅವಧಿಯಲ್ಲಿ ಸುಮಾರು 1.30 ಕೋಟಿ ಮಂದಿ ಶ್ರದ್ಧಾಳುಗಳು ಗಂಗಾನದಿಯಲ್ಲಿ ಪುಣ್ಯಸ್ನಾನಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 11ರ ವರೆಗಿನ ಅವಧಿಯಲ್ಲಿ ಗಂಗಾ, ಯಮುನಾ, ಸರಸ್ವತೀ ನದಿಗಳ ಸಂಗಮದಲ್ಲಿ 50 ಲಕ್ಷ ಮಂದಿ ತೀರ್ಥಸ್ನಾನ ಮಾಡಿದ್ದಾರೆ ಎಂದು ಮಾಘ ಮೇಳದ ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ನಡುವೆ ಭಕ್ತರ ತೀರ್ಥಸ್ನಾನ, ಪಿಂಡಪ್ರದಾನ ಇತ್ಯಾದಿ ವಿಧಿಗಳು ಸುರಳೀತವಾಗಿ ನೆರವೇರುವಂತಾಗಲು ವಿವಿಧ ಸ್ಥಳಗಳಲ್ಲಿ ಹಲವಾರು ಪೊಲೀಸ್ ತಂಡಗಳು ಕರ್ತವ್ಯದಲ್ಲಿವೆ ಎಂದು ಮೇಳದ ಕಚೇರಿ ತಿಳಿಸಿದೆ.
ಇದನ್ನೂ ಓದಿ:ಬೇಸಿಗೆ ಪ್ರಾರಂಭಕ್ಕೆ ಮುನ್ನವೇ ಉಷ್ಣಾಂಶ ಏರಿಕೆ
ಜಲ ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಈಜು ಪರಿಣಿತ ಕಾರ್ಯಕರ್ತರು ಸಂಗಮ ಮತ್ತು ಗಂಗಾನದಿಯಲ್ಲಿ ಸತತ ನಿಗಾ ಇರಿಸಿದ್ದಾರೆ. ಇದರ ಜತೆಗೆ ಎಲ್ಲೆಡೆಯೂ ಸಿಸಿಟಿವಿ ಮತ್ತು ಡ್ರೋನ್ ಕೆಮರಾಗಳನ್ನು ಕೂಡ ಅಳವಡಿಸಲಾಗಿದೆ.