Advertisement

ತವರಿನ ವಿಶ್ವಕಪ್‌ ಬಳಿಕ ವೇಡ್‌ ವಿದಾಯ

09:38 PM Nov 18, 2021 | Team Udayavani |

ಅಡಿಲೇಡ್‌: ಆಸ್ಟ್ರೇಲಿಯದ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ ತಮ್ಮ ವಿದಾಯದ ನಿರ್ಧಾರವನ್ನು ಬದಲಿಸಿದ್ದಾರೆ. ಮೊನ್ನೆಯ ಟಿ20 ವಿಶ್ವಕಪ್‌ ಬಳಿಕ ಚುಟುಕು ಕ್ರಿಕೆಟ್‌ನಿಂದ ದೂರ ಸರಿಯುವುದಾಗಿ ಹೇಳಿದ್ದ ವೇಡ್‌, ಇದನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಿದ್ದಾರೆ.

Advertisement

ಮುಂದಿನ ವರ್ಷ ತವರಲ್ಲೇ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದ್ದು, ಇದು ಮುಗಿದೊಡನೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದಲೇ ದೂರ ಸರಿಯುವುದಾಗಿ ವೇಡ್‌ ಪ್ರಕಟಿಸಿದರು. ಟ್ರೋಫಿಯನ್ನು ಉಳಿಸಿಕೊಳ್ಳುವುದು ತಂಡದ ಗುರಿ ಎಂದೂ ಅವರು ಹೇಳಿದರು.

ಮ್ಯಾಥ್ಯೂ ವೇಡ್‌ 2021ರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಆಯ್ಕೆಯಾದದ್ದೇ ಒಂದು ಅಚ್ಚರಿ. ಈ ಸ್ಥಾನ ಅಲೆಕ್ಸ್‌ ಕ್ಯಾರಿ ಅವರದ್ದಾಗಬೇಕಿತ್ತು.

ವೇಡ್‌ ಪಾಕಿಸ್ಥಾನದೆದುರಿನ ಸೆಮಿಫೈನಲ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ತಂಡದ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next