Advertisement

ಮಕ್ಕಳಿಂದಲೇ ಮ್ಯಾಥ್ಸ್ ಮ್ಯಾಜಿಕ್‌; 21 ಲಕ್ಷ ಮಿಕ್ಕಿ ವೀಕ್ಷಕರು; ಕಲಿಕೆಗೆ ಹೊಸ ದಿಕ್ಕು

01:34 AM Oct 12, 2021 | Team Udayavani |

ಬೆಳ್ತಂಗಡಿ: ಕೋವಿಡ್‌ ಬಳಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಪ್ರಯೋಗಾತ್ಮಕ ಚಿಂತನೆಗಳು ಮೂಡಿಬಂದಿವೆ. ಭೌತಿಕ ತರಗತಿ ಆರಂಭದ ಬಳಿಕ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು “ಮ್ಯಾಥ್ಸ್ ಮ್ಯಾಜಿಕ್‌’ ಯುಟ್ಯೂಬ್‌ ಚಾನೆಲ್‌ ತೆರೆದು ತಾವೇ ಗಣಿತ ಪಾಠದ ವಿಶ್ಲೇಷಣೆ ಜತೆಗೆ ನ್ಯೂಸ್‌ ಆ್ಯಂಕರಿಂಗ್‌ ನಡೆಸುತ್ತ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.

Advertisement

ಗಣಿತ ಪಾಠ ಬಹಳ ಕ್ಲಿಷ್ಟ ಎಂಬ ಭಾವನೆ ಬಹಳಷ್ಟು ಮಕ್ಕಳಿಗಿದೆ. ಆದರೆ ನಡ ಪ್ರೌಢಶಾಲೆಯ ಮಕ್ಕಳು ಹಾಗಲ್ಲ. ಇವರು ಗಣಿತ ಕಲಿಕೆಗೆ ಹೊಸ ದಿಕ್ಕೊಂದನ್ನು ಪರಿಚಯಿಸಿದ್ದಾರೆ.

ದಾನಿಗಳು ಮತ್ತು ಹಳೆ ವಿದ್ಯಾರ್ಥಿ ಗಳ ಸಹಕಾರದಿಂದ ಉತ್ಕೃಷ್ಟ ಮಟ್ಟದ ಗಣಿತ ಪ್ರಯೋ ಗಾಲಯ ನಿರ್ಮಿಸಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್‌ ಕೊಯ್ಯೂರು ಅವರ ಮಾರ್ಗದರ್ಶನದಲ್ಲಿ ಮಕ್ಕಳೇ ಗಣಿತ ಪಾಠ ವಿಶ್ಲೇಷಣೆ ನಡೆಸುತ್ತಿರುವುದು ಗಮನಾರ್ಹ ಸಾಧನೆ.

ಕಲಿಕೆಯಲ್ಲಿ ಆಕರ್ಷಣೆ, ಸೀಮಿತ ಅವಧಿ ಮತ್ತು ನೈಜತೆಯ ಜತೆಗೆ ಮಕ್ಕಳೇ ಮಕ್ಕಳಿಗಾಗಿ ಸರಳ ವಿಧಾನ ದಲ್ಲಿ ಮಾಡೆಲ್‌ಗ‌ಳ ಮೂಲಕ ಗಣಿತ ವನ್ನು ಪರಿಚಯಿಸುತ್ತಿದ್ದಾರೆ. ಇದ ರಿಂದ ಗಣಿತದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟುತ್ತದೆ, ಸುಲಭವಾಗಿ ಅರ್ಥವಾಗುತ್ತದೆ.

ಮಕ್ಕಳಲ್ಲಿ ಸಭಾಕಂಪನ ಹೋಗ ಲಾಡಿಸುವ ಮತ್ತು ಸ್ವಕಲಿಕೆ ಯನ್ನು ಪ್ರೋತ್ಸಾಹಿಸುವ, ತಾನು ಕಲಿತದ್ದನ್ನು ಇತರರಿಗೆ ಸುಲಲಿತ ವಾಗಿ ತಿಳಿಸಿ ಕೊಡುವ ಉದ್ದೇಶ ದಿಂದ ಯೂಟ್ಯೂಬ್‌ ಚಾನೆಲ್‌ ತೆರೆಯ ಲಾಗಿದೆ. ಇಲ್ಲಿ ವೀಡಿಯೋ ಮಾಡು ವುದು, ಎಡಿಟಿಂಗ್‌, ಗ್ರೀನ್‌ ರೂಮ್‌ ಸೆಟ್ಟಿಂಗ್‌ ಎಲ್ಲವನ್ನೂ ಮಾಡುವುದು ಮಕ್ಕಳೇ. ವಾರಕ್ಕೊಂದರಂತೆ ಗಣಿತ ಮಾದರಿಗಳ ವಿವರಣೆಯನ್ನು ಕೊಡಿಸಲಾಗುತ್ತಿದೆ. ಚಾನೆಲ್‌ ರಾಷ್ಟ್ರಾದ್ಯಂತ ಪ್ರಚಾರ ಪಡೆದಿದ್ದು, 21 ಸಾವಿರ ಸಬ್‌ಸೈಬರ್‌ಗಳಿದ್ದಾರೆ, 21 ಲಕ್ಷ ಮಂದಿ ವೀಕ್ಷಿಸಿದ್ದಾರೆ.

Advertisement

“ಮ್ಯಾಥ್ಸ್ ಮ್ಯಾಜಿಕ್‌’ ಚಾನೆಲ್‌ ನಲ್ಲಿ ಶೇ. 90 ಗಣಿತ ಪಾಠಗಳ ಕುರಿತು ವಿವರಣೆ ಯಿದ್ದು, ಶೇ. 10 ಇತರ ಚಟು ವಟಿಕೆ ಗಳ ವೀಡಿಯೋ ಇದೆ. ಜತೆಗೆ ವಿದ್ಯಾರ್ಥಿಗಳು ಶಾಲಾ ಚಟು ವಟಿಕೆಗಳ ವಿವರ ನೀಡುವ ಸುದ್ದಿ ಚಾನೆಲ್‌ ಸೃಷ್ಟಿಸಿ ಸುದ್ದಿ ವಾಚನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

6 ವಿಷಯಗಳಿಗೂ ಲ್ಯಾಬ್‌
100ಕ್ಕೂ ಮಿಕ್ಕಿ ಗಣಿತ ಮಾಡೆಲ್‌ ಜತೆಗೆ ಉತ್ಕೃಷ್ಟ ಮಟ್ಟದ ಲ್ಯಾಬ್‌ ಹೊಂದಿರುವ ಪ್ರೌಢಶಾಲೆ ಇದು. ಎಲ್ಲ 6 ವಿಷಯಗಳಿಗೆ ಸಂಬಂಧಿಸಿದ ಲ್ಯಾಬ್‌ಗಳನ್ನು ನಿರ್ಮಿಸಲು ಶಾಲಾ ಶಿಕ್ಷಕ ವರ್ಗ ಶ್ರಮಿಸುತ್ತಿದೆ. ಗಣಿತ, ಹಿಂದಿ ಲ್ಯಾಬ್‌ ಈಗಾಗಲೇ ಇದ್ದರೆ ಸಮಾಜ, ವಿಜ್ಞಾನಗಳ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಸಿದ್ಧಗೊಳ್ಳುತ್ತಿದೆ. ಇನ್ನುಳಿದಂತೆ ಇಂಗ್ಲಿಷ್‌, ಕನ್ನಡ ಲ್ಯಾಬ್‌, ಆಧುನಿಕ ಗ್ರಂಥಾಲಯ, ಶಾಸಕರ ಮತ್ತು ಶಿಕ್ಷಣ ಇಲಾಖೆಯ ಅನು ದಾನದಡಿ ಸುಸಜ್ಜಿತ ಸಭಾಂಗಣ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದೆ.

ಮಕ್ಕಳ ಸ್ನೇಹಿ, ಭಯಮುಕ್ತ ಕಲಿಕಾ ವಾತಾವರಣ, ವಿಧಾನ ರೂಪಿಸಿದಾಗ ಅವರು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಪೈಥಾಗೊರಸ್‌ ಪ್ರಮೇಯ, ಥೇಲ್ಸ್‌ ಪ್ರಮೇಯ, ಬೀಜ ಗಣಿತದ ಸೂತ್ರಗಳು, ಮೋಜಿನ ಗಣಿತ ಇತ್ಯಾದಿಗಳನ್ನು ಮಕ್ಕಳೇ ಮಾಡುತ್ತಿದ್ದಾರೆ.
-ಯಾಕೂಬ್‌ ಕೊಯ್ಯೂರು,
ಶಿಕ್ಷಕ, ನಡ ಪ್ರೌಢಶಾಲೆ

 -ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next