Advertisement

“ಮ್ಯಾತ್‌-ಎ ಸಟ್ಲ ಲ್ಯಾಂಗ್ವೇಜ್‌ ಆಫ್ ದಿ ಯುನಿವರ್ಸ್‌’ಪುಸ್ತಕ ಬಿಡುಗ

01:00 AM Mar 15, 2019 | Harsha Rao |

ಉಡುಪಿ: ವಿದ್ಯಾರ್ಥಿ ರಾಘವೇಂದ್ರ ಎನ್‌. ಭಟ್‌ ಅವರು ಬರೆದಿರುವ “ಮ್ಯಾತ್‌-ಎ ಸಟ್ಲ ಲ್ಯಾಂಗ್ವೇಜ್‌ ಆಫ್ ದಿ ಯುನಿವರ್ಸ್‌’ ಪುಸ್ತಕವನ್ನು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌.ಪೈ ಅವರು ಬುಧವಾರ ಮಣಿಪಾಲದ ಮಣಿಪಾಲ್‌ ಡಾಟ್‌ ನೆಟ್‌ ಕಟ್ಟಡದಲ್ಲಿ ಜರಗಿದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಡಾ| ಸಂಧ್ಯಾ ಎಸ್‌. ಪೈ ಅವರು “ಮುಂದಿನ 20 ವರ್ಷಗಳು ಯುವಜನತೆಯ ಸಾಧನೆಯ ಯುಗಗಳಾಗಲಿದೆ. ಪ್ರತಿಭಾವಂತ, ಸಾಧನೆಯ ಹಂಬಲವುಳ್ಳ, ದೇಶ ಭಕ್ತಿ, ಅರ್ಪಣಾ ಮನೋಭಾವದ ಯುವಕರ ತಂಡದ ಅಗತ್ಯವಿದೆ. ರಾಘವೇಂದ್ರ ಅವರಂಥ ಯುವಕರಿಂದ ಸತ್ಯ ಯುಗ ಮತ್ತೆ ಬಂದಂತಾಗಿದೆ. ರಾಘವೇಂದ್ರ ಅವರು ಬರೆದಿರುವ ಪುಸ್ತಕ ಗಣಿತವನ್ನು ವಿವಿಧ ವಿಧಾನಗಳ ಮೂಲಕ ಸರಳವಾಗಿ ತಿಳಿಸಿಕೊಡುತ್ತದೆ. ವಿದ್ಯಾರ್ಥಿಯೋರ್ವ ಇಂತಹ ಪುಸ್ತಕ ಬರೆದಿರುವುದು ಮಹತ್ವದ ಸಾಧನೆ’ ಎಂದು ಹೇಳಿದರು.

ರಾಘವೇಂದ್ರ ಅವರು ಮಾತನಾಡಿ, “ಗಣಿತ ಯಾಕೆ ಕಷ್ಟವಾಗುತ್ತದೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ನಡೆಸಿದ್ದೇನೆ. ಇದು ಗಣಿತದ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ. ಶಿಕ್ಷಕರು ಕೂಡ ಸುಲಭ ವಿಧಾನದಲ್ಲಿ ಗಣಿತವನ್ನು ಹೇಗೆ ಬೋಧಿಸಬಹುದೆಂಬುದನ್ನು ಹೇಳಿಕೊಡುವ ಯತ್ನ ನಡೆಸಿದ್ದೇನೆ. ದಿನನಿತ್ಯದ ಚಟುವಟಿಕೆಗಳಲ್ಲಿ ಗಣಿತ, ಗಣಿತದ ಕತೆಗಳು, ಪ್ರಾಚೀನ ಭಾರತದ ಗಣಿತ, ಗಣಿತದ ಒಗಟುಗಳು ಮೊದಲಾದವುಗಳನ್ನೊಳಗೊಂಡ ಅಧ್ಯಾಯಗಳಿವೆ’ ಎಂದು ಹೇಳಿದರು.

ಪ್ರೇಮಲೀಲಾ ಭಟ್‌, ಕಸ್ತೂರಿ ಹೆಗ್ಡೆ ಉಪಸ್ಥಿತರಿದ್ದರು. ಮೇಧಾ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next