Advertisement
ಬಾರಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ, ನಂಜನಗೂಡು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸದೆ ಇರುವುದೂ ಕಾಂಗ್ರೆಸ್ ಜಯ ಗಳಿಸಲು ಒಂದು ಕಾರಣ. ಆದರೆ ಅದೇ ಕಾರಣವಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಶತ್ರುವೂ ಅಲ್ಲ, ಮಿತ್ರರೂ ಅಲ್ಲ ಇಂದು ನಿಮ್ಮೊಂದಿಗೆ ದೇವೇಗೌಡರು ಬರುವುದಿತ್ತು. ಈಗ ದೇವೇಗೌಡರ ಮೇಲೆ ಪ್ರೀತಿ ಹೆಚ್ಚಾಗಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮ ಮೇಲೂ ಪ್ರೀತಿ ಇದೆ. ರಾಜಧಿಕೀಯದಲ್ಲಿ ಯಾರೂ ಖಾಯಂ ಶತ್ರುಗಳಿಲ್ಲ, ಯಾರೂ ಖಾಯಂ ಮಿತ್ರರಿಲ್ಲ. ದೇವೇಗೌಡರು ಬರುಧಿವುಧಿದಿತ್ತು. ಅವರಿಗೆ ಬೇರೊಂದು ಕಾರ್ಯಕ್ರಮವಿದ್ದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದರು.
ವೀರಶೈವರು ಇತ್ತೀಚಿನ ಚುನಾಧಿವಣೆಯಲ್ಲಿ ಕಾಂಗ್ರೆಸ್ ಕಡೆ ಒಲವು ತೋರಿಸಿದ್ದರಿಂದ ಅವಧಿರನ್ನು ಸಚಿವ ಸಂಪುಟ ಸೇರ್ಪಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೈಕಮಾಂಡ್ ಸೂಚನೆ ನೀಡಧಿಲಿದೆ. ಆದಷ್ಟು ಶೀಘ್ರ ಸಂಪುಟ ವಿಸ್ತರಿಸಲಾಗುವುದು. ವಿಧಾನ ಪರಿಷತ್ ಸ್ಥಾನಕ್ಕೂ ಹೈಕಮಾಂಡ್ ಸೂಚನೆ ನೀಡಲಿದೆ. ಮೊನ್ನೆಯ ಚುನಾವಣೆಯಲ್ಲಿ ಕೇವಲ ವೀರಶೈವರು ಮಾತ್ರವಲ್ಲ , ಎಲ್ಲ ಜಾತಿಯವರೂ ಮತ ಹಾಕಿದ್ದಾರೆ ಎಂದು ಹೇಳಿದರು. ಪುನಶ್ಚೇತನ ಕಷ್ಟ
ಸಕ್ಕರೆ ಕಾರ್ಖಾನೆ ಲಾಭಧಿದಾಯಕಧಿವಾಗಿ ನಡೆಯುತ್ತಿಲ್ಲ. ಪಾಂಡವಧಿಪುರಧಿದಲ್ಲಿ ಕಬ್ಬಿನ ಇಳುವರಿ ಶೇ. 7-8, ಬೆಳಗಾವಿಧಿಯಲ್ಲಿ ಶೇ. 11, ಮೈಸೂರಿನಲ್ಲಿ 9.5-10 ಇದೆ. ಹೀಗಿರುವಾಗ ಬ್ರಹ್ಮಾವರಧಿದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಕಷ್ಟ ಎಂದರು. ವಾರಾಹಿ ನೀರಾವರಿ ಯೋಜನೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
Related Articles
Advertisement
ಡಿಸಿ ಮೇಲೆ ಹಲ್ಲೆ: ನಿರ್ದಾಕ್ಷಿಣ್ಯ ಕ್ರಮಜಿಲ್ಲಾಧಿಕಾರಿ ಮೇಲೆ ಮರಳು ಮಾಫಿಯಾ ನಡೆಸಿದ ಹಲ್ಲೆ ಪ್ರಕರಣಧಿದಲ್ಲಿ ಆರೋಪಿಗಳು ಎಷ್ಟೇ ಪ್ರಬಲಧಿರಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಧಿಸುವುದಿಲ್ಲ. ಬಂಧನವಾಗದೆ ಉಳಿಧಿದವರನ್ನೂ ಬಂಧಿಸುತ್ತೇವೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿ
ಕರಾವಳಿಯ ಮರಳು ಸಮಸ್ಯೆ ನೀಗಿಸಲು ಪ್ರತ್ಯೇಕ ಮರಳು ನೀತಿ ಮಾಡುತ್ತೇವೆ.
ಕೆಂಪು ದೀಪ
ಕೆಂಪು ದೀಪದ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ತಳೆದಿದೆ. ನಾವು ಪರಿಶೀಲನೆ ಮಾಡುತ್ತಿದ್ದೇವೆ. (ಮುಖ್ಯಧಿಮಂತ್ರಿಗಳು ಏರಿದ ಕಾರಿನಲ್ಲಿ ಕೆಂಪು ದೀಪ ಇರಲಿಲ್ಲ) ದೇವರು- ಧರ್ಮ…
ನಾನು ದೇವರು, ಧರ್ಮದ ವಿರೋಧಿಯಲ್ಲ. ಆದರೆ ಪದೇ ಪದೇ ದೇವರ ಮೊರೆ ಹೋಗುವವನಲ್ಲ, ದೇವರನ್ನು ಎಲ್ಲೆಲ್ಲೋ ಹುಡುಕಿಕೊಂಡು ಹೋಗುವವನಲ್ಲ. ನಮ್ಮೂರ ದೇವರು ನನಗೆ ಸಾಕು.