Advertisement

ಪಂದ್ಯ ರದ್ದು ಖಾತೆ ತೆರೆದ ಆಫ್ರಿಕಾ!

12:37 AM Jun 11, 2019 | Team Udayavani |

ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮಳೆಯ ಆಟ ಜೋರಾ ಗುತ್ತಿದೆ. ಇದಕ್ಕೆ ಇನ್ನೊಂದು ಪಂದ್ಯ ಕೊಚ್ಚಿ ಹೋಗಿದೆ. ಸೋಮವಾರ ಸೌತಾಂಪ್ಟನ್‌ನಲ್ಲಿ ನಡೆಯಬೇಕಿದ್ದ ವೆಸ್ಟ್‌ ಇಂಡೀಸ್‌-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಕೇವಲ 7.3 ಓವರ್‌ಗಳಿಗೆ ಕೊನೆಗೊಂಡಿದೆ.

Advertisement

ಇದರಿಂದ ಎರಡೂ ತಂಡಗಳಿಗೆ ಅಂಕವನ್ನು ಹಂಚಲಾಯಿತು. ಸತತ 3 ಸೋಲಿನಿಂದ ಕಂಗೆಟ್ಟಿದ್ದ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆದು ಅಷ್ಟರ ಮಟ್ಟಿಗೆ ಸಮಾಧಾನಪಟ್ಟಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 7.3 ಓವರ್‌ಗಳಲ್ಲಿ 2 ವಿಕೆಟಿಗೆ 29 ರನ್‌ ಮಾಡಿದಾಗ ಸುರಿದ ಮಳೆ ಮತ್ತೆ ಆಟವನ್ನು ಮುಂದು ವರಿಸಲು ಬಿಡಲಿಲ್ಲ. ಆಗ 17 ರನ್‌ ಮಾಡಿದ ಕ್ವಿಂಟನ್‌ ಡಿ ಕಾಕ್‌ ಮತ್ತು ಖಾತೆ ತೆರೆಯsದ ನಾಯಕ ಫಾ ಡು ಪ್ಲೆಸಿಸ್‌ ಕ್ರೀಸಿನಲ್ಲಿದ್ದರು. ಹಾಶಿಮ್‌ ಆಮ್ಲ (6), ಐಡನ್‌ ಮಾರ್ಕ್‌ ರಮ್‌ (5) ಅಗ್ಗಕ್ಕೆ ಔಟಾಗಿದ್ದರು. ಎರಡೂ ವಿಕೆಟ್‌ ಶೆಲ್ಡನ್‌ ಕಾಟ್ರೆಲ್‌ ಪಾಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next