Advertisement

“ಮೆಟಡೋರ್‌” ಏರಿದ ಕವಿತಾ ಗೌಡ

04:50 PM May 18, 2022 | Team Udayavani |

ಈ ವರ್ಷದ ಆರಂಭದಲ್ಲಿ “ಹುಟ್ಟುಹಬ್ಬದ ಶುಭಾಶಯ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಕವಿತಾ ಗೌಡ ಈ ಬಾರಿ “ಮೆಟಡೋರ್‌’ ಏರಿ ಥಿಯೇಟರ್‌ಗೆ ಬರಲು ತಯಾರಿ ನಡೆಸಿದ್ದಾರೆ.

Advertisement

ಹೌದು, ಕವಿತಾ ಗೌಡ ಸದ್ಯ”ಮೆಟಡೋರ್‌’ ಸಿನಿಮಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾದ “ಗಾಂಧಾರಿ…’ ಎಂಬ ಪ್ರಮೋಷನಲ್‌ಸಾಂಗ್‌ನಲ್ಲಿ ಕವಿತಾ ಗೌಡ ಮಿಂಚಿದ್ದು, ಸದ್ಯ ಈ ಸಾಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿಸೌಂಡ್‌ ಮಾಡುತ್ತಿದೆ. ಈ ಹಿಂದೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸುದರ್ಶನ್‌ ಜಿ ಶೇಖರ್‌ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

ಐದು ಕಥೆಯನ್ನು ಹೇಳುವ ಹೈಪರ್‌ ಲಿಂಕ್‌ ಸಿನಿಮಾವಾಗಿರುವ “ಮೆಟಡೋರ್‌’ ಚಿತ್ರದಲ್ಲಿ ಕಿರಣ್‌, ರವಿ ಮೈಸೂರು, ಅರ್ಚನಾ ಮಹೇಶ್‌, ಮೋಹನ್‌ ಬಾಬುಮೊದಲಾದವರು ಪ್ರಮುಖ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಚಿತ್ರಕ್ಕೆ ತಂಗಾಳಿ ನಾಗರಾಜ್‌ ಸಂಗೀತವಿದ್ದು, “ಓಂ ಸ್ಟುಡಿಯೋ ಪ್ರೂಡಕ್ಷನ್‌ ಹೌಸ್‌’ ಬ್ಯಾನರ್‌ನಡಿ ಕಿರಣ್‌ ಕುಮಾರ್‌ ಹೆಚ್‌. ನಿರ್ಮಿಸಿರುವ ಈ ಸಿನಿಮಾ ಮೇ 27ರಂದು ತೆರೆಗೆ ಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next