ಮುನವಳ್ಳಿ: ಮಠಮಾನ್ಯಗಳು ಹಾಗೂ ಮಠಾಧೀಶರು ಕೇವಲ ಧಾರ್ಮಿಕ ಜಾಗೃತಿಗೆ ಸೀಮಿತರಾಗದೇ ಸಮಾಜ ಮುಖಿಯಾಗಿ ಕೆಲಸ ಮಾಡುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
Advertisement
ಅಂಥವರಲ್ಲಿ ಸೋಮಶೇಖರ ಮಠದ ಹಿಂದಿನ ಪೂಜ್ಯರಾದ ಲಿಂ| ಚನ್ನಬಸವ ಸ್ವಾಮೀಜಿ ಅಗ್ರಗಣ್ಯರು. ದೇಶಪ್ರೇಮ, ದೇಶಕ್ಕಾಗಿ ತ್ಯಾಗ ಮಾಡುವಲ್ಲಿ ಮಠಾಧೀಶರು ಹಿಂದೆ ಬಿದ್ದಿಲ್ಲ ಎಂದು ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಸ್ವಾಮೀಜಿಯವರ 23ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅರುಣಗೌಡ ಪಾಟೀಲ, ಸಂಜೀವಕುಮಾರ ಕಾಮಣ್ಣವರ, ಮಲ್ಲಿಕಾರ್ಜುನ ಜಮಖಂಡಿ, ಶಂಕರ ಗಯ್ನಾಳಿ, ವಿಜಯಲಕ್ಷ್ಮೀ ಗೊರಾಬಾಳ, ಗಂಗಮ್ಮ ಸಂಕಣ್ಣವರ, ಪ್ರಾ| ಎಂ.ಎಚ್.ಪಾಟೀಲ, ಪ್ರಾ| ಕೆ.ಬಿ. ನಲವಡೆ, ಮಂಜುಳಾ ಭಾಂಡೇಕರ, ದಾನು ಗದಗಿನ, ಶ್ರೀಶೈಲ ಗೋಪಶೆಟ್ಟಿ, ಐ.ಕೆ.ಮಠಪತಿ, ಶೇಖರ ಮುಪ್ಪಿ ನವರಮಠ, ಅಠೊಕ ಸಂಕಣ್ಣವರ, ಪರಶು ಕದಂ, ವೈ.ಟಿ.ತಂಗೋಜಿ ಸೇರಿದಂತೆ ಇತರರು ಇದ್ದರು.