Advertisement

Delhi ಮೆಟ್ರೋದಲ್ಲಿ ಹಸ್ತಮೈಥುನ: ಆರೋಪಿಯ ಚಿತ್ರ ಬಿಡುಗಡೆ!

12:10 AM May 18, 2023 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ದಿಲ್ಲಿ ಮೆಟ್ರೋ ರೈಲಿನಲ್ಲಿ ಸಾರ್ವಜನಿಕರ ಎದುರೇ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಚಿತ್ರವನ್ನು ದಿಲ್ಲಿ ಪೊಲೀಸರು ಬುಧವಾರ ಬಿಡು ಗಡೆಗೊಳಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದರೂ ನಾಗರಿಕರು ಹಂಚಿ ಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. “ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ದಿಲ್ಲಿ ಮೆಟ್ರೋ ರೈಲಿನಲ್ಲಿ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯು ಪೊಲೀಸರಿಗೆ ಬೇಕಾಗಿದ್ದಾನೆ. ಈತನ ಬಗ್ಗೆ ಮಾಹಿತಿ ತಿಳಿದರೆ ಪೊಲೀಸ್‌ ಕಂಟ್ರೋಲ್‌ ರೂಮ್‌ 1511 ಅಥವಾ ಪೊಲೀಸ್‌ ಸಹಾಯವಾಣಿ 112ಕ್ಕೆ ಕರೆ ಮಾಡಿ. ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ದಿಲ್ಲಿ ಡಿಸಿಪಿ ಮೆಟ್ರೋ ಟ್ವೀಟ್‌ ಮಾಡಿದ್ದಾರೆ.

Advertisement

ಕಳೆದ ತಿಂಗಳು ದಿಲ್ಲಿ ಮೆಟ್ರೋದಲ್ಲಿ ತನ್ನ ಮೊಬೈಲ್‌ ನೋಡುತ್ತಾ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದನ್ನು ಕಂಡು ಕಸಿವಿಸಿಗೊಂಡ ಸಹ ಪ್ರಯಾಣಿಕರು ಅವನಿಂದ ದೂರ ಸರಿದಿದ್ದಾರೆ. ಮತ್ತೂಬ್ಬ ಪ್ರಯಾಣಿಕ ಆತನ ಅಶ್ಲೀಲ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಈ ವೀಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಳಿವಾಳ್‌ ಹೊರಡಿಸಿರುವ ನೋಟಿಸ್‌ ಆಧಾರದಲ್ಲಿ ದಿಲ್ಲಿ ಪೊಲೀಸರು ಸ್ವಯಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಘಟನೆ ಯ ಅನಂತರ ದಿಲ್ಲಿಮೆಟ್ರೊ ರೈಲು ನಿಗಮವು ತನ್ನ ರೈಲುಗಳಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ನಿಯೋಜಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next