Advertisement

ಸಣ್ಣ ಕಥೆಗಳ ಮೂಲಕ ವೈಚಾರಿಕತೆ ಬೆಳೆಸಿದ ಮಾಸ್ತಿ

05:42 PM Jun 09, 2022 | Team Udayavani |

ಬಂಗಾರಪೇಟೆ: ಮಾಸ್ತಿ ಅವರು ಸಣ್ಣ ಕಥೆಗಳಲ್ಲಿ ವೈಚಾರಿಕ ಸಮೃದ್ಧಿಯನ್ನು ತುಂಬಿ ಜನರಲ್ಲಿ ವಿಚಾರವಂತಿಕೆ ಬೆಳೆಸಿದರು ಎಂದು ಕೆಜಿಎಫ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಧರಣೀದೇವಿ ಹೇಳಿದರು. ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಅನಿಕೇತನ ಕನ್ನಡ ಬಳಗ ಹಮ್ಮಿಕೊಂಡಿದ್ದ ಡಾ.ಮಾಸ್ತಿ ವೆಂಕಟೇಶ ಅಯ್ಯಂ‌ರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮನೆಮಾತು ತಮಿಳಾದರೂ ಕನ್ನಡಕ್ಕೆ ತಮ್ಮ ಸೇವೆ ಸಲ್ಲಿಸಿದರು. ಅಧಿಕಾರಿಯಾಗಿ, ಸಾಹಿತಿಯಾಗಿ ಎರೆಡೂ ಕಡೆ ಸಮತೋಲವನ್ನು ಕಾಪಾಡಿಕೊಂಡು ಶೃತಿ ಮೀರದೇ ಬದುಕು ನಡೆಸಿದರು. ಸಂದರ್ಶನವೊಂದರಲ್ಲಿ ತಮ್ಮ ಹೆಂಡತಿಯ ಸಹಾಯವನ್ನು ಮರೆಯಲು ಸಾಧ್ಯವಿಲ್ಲವೆಂದು ಹೇಳಿಕೊಂಡಿದ್ದನ್ನು ಮೆಲುಕು ಹಾಕಿದರು.

ಕ್ರಿಸ್ತು ಕಾಲೇಜಿನ ಉಪನ್ಯಾಸಕ ಡಾ. ಸರ್ವೇಶ್‌ ಬಂಟಹಳ್ಳಿ ಮಾತನಾಡಿ, ಮಾಸ್ತಿಯವರು ಅಧಿಕಾರಿಯಾಗಿ ಕನ್ನಡವನ್ನು ಶ್ರೀಸಾಮಾನ್ಯನ ಭಾಷೆಯಲ್ಲಿ ಬಳಸಿದ್ದ ಕಾರಣ ಸರ್ಕಾರದ ಅದೇಶಗಳು ಕನ್ನಡದಲ್ಲಿ ತಲುಪಲು ಸಹಕಾರಿಯಾಯಿತು. ಶ್ರೀನಿವಾಸ ಕಾವ್ಯನಾಮದಲ್ಲಿ ಪ್ರಖ್ಯಾತರಾಗಿರುವ ಮಾಸ್ತಿಯವರು ಗದ್ಯದಲ್ಲಿ, ಪದ್ಯದಲ್ಲಿ ಆಗಲಿ ಕಥೆ ಹೇಳುವುದರಲ್ಲಿ ತುಂಬಾ ಪರಿಣಿತರು ಎಂದು ತಿಳಿಸಿದರು.

ತಹಸೀಲ್ದಾರ್‌ ಎಂ.ದಯಾನಂದ್‌, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್‌ ಮಾತನಾಡಿ ದರು. ಆದರ್ಶ ಶಾಲೆ ಪ್ರಾಂಶುಪಾಲೆ ಶಶಿ ಕಲಾ, ಅನಿಕೇತನ ಬಳಗದ ರಾಮಪ್ರಸಾದ್‌, ಭಾರ್ಗವಿ ಅಮ್ಮಾಳ್‌, ಮೈ.ಸತೀಶಕುಮಾರ್‌, ಶ್ಯಾಮಲಾ ನಾಗರಾಜ್‌, ಲಲಿತಾ, ಕುಮುದಿನಿ, ಪ್ರಸಾದ್‌, ಬಾ.ಹ.ಶೇಖರಪ್ಪ, ರಾಮಮೂರ್ತಿ, ಲಯನ್‌ ನಂದ ಇತರರಿದ್ದರು.

ಮಾಸ್ತಿ ಕಾವ್ಯಕ್ಕೆ ಮನ್ನಣೆ ಅತ್ಯಗತ್ಯ
ಮಾಸ್ತಿ: ಡಾ.ಮಾಸ್ತಿ ಅವರ ಸಣ್ಣ ಕಥೆಗಳನ್ನು ಪ್ರಖ್ಯಾತಿ ಪಡೆದಿವೆ. ಆದರೆ, ಅವರು ಬರೆದಿರುವ ಕಾವ್ಯವನ್ನು ಸಾಹಿತ್ಯ ವಿಮರ್ಶಾ ಲೋಕ ಅಷ್ಟು ಗಮನಿಸಿಲ್ಲ ಎಂದು ಖ್ಯಾತ ಸಾಹಿತಿ ಸ.ರಘುನಾಥ್‌ ಹೇಳಿದರು. ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌, ಕನ್ನಡ, ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ, ತಾಪಂನಿಂದ ಹಮ್ಮಿಕೊಂಡಿದ್ದ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ 131ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿದರು.

Advertisement

ಮಾಸ್ತಿ ಅವರ ಕಾವ್ಯವನ್ನು ಸಾಹಿತ್ಯ ವಿಮರ್ಶಾ ಲೋಕ ಅಷ್ಟು ಗಮನಿಸಿಲ್ಲ ಎಂಬುದೇ ದುರಂತದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಡಾ.ಮಾಸ್ತಿ ಟ್ರಸ್ಟ್‌ ಮಾಸ್ತಿ ಅವರ ಸಮಗ್ರ ಕಾವ್ಯವನ್ನು ಮುದ್ರಿಸಿ ಮಾಸ್ತಿ ಅವರ ಸಣ್ಣ ಕಥೆಗಳು ಎಲ್ಲಾ ಸಿಕ್ಕ ಹಾಗೆ ಅವರ ಕಾವ್ಯ ಸಿಗುವಂತೆ ಮಾಡಬೇಕು ಎಂದರು. ಸಾಹಿತಿ ಜ.ಮು.ಚಂದ್ರ ಮಾತನಾಡಿದರು. ಸಾಹಿತಿ ಡಾ.ನಾ.ಮುನಿರಾಜು ಕಾರ್ಯಕ್ರಮದ ಕುರಿತು ಮಾತನಾಡಿದರು. ಕವಿಗಳಾದ ಅಶೋಕ್‌ ಬಾಬು ಟೇಕಲ್‌, ಮಾ.ಚಿ.ನಾಗರಾಜ್‌, ಡಾ.ಎ.ಜಯಲಕ್ಷಿ, ಸುಮಂಗಲ ಮೂರ್ತಿ, ರೋಣೂರು ವೆಂಕಟೇಶ್‌, ಶ್ರೀನಾಥ್‌ ಅಜಾದ್‌, ಕೆ.ಮುನಿಕೃಷ್ಣಪ್ಪ, ಕೋಳಾಲಪ್ಪ, ಅಶ್ವಿ‌ನಿ ವೆಂಕಟೇಶ್‌, ವನಿತ ಅರಳೇರಿ, ವಿಕ್ರಂ ಶ್ರೀನಿವಾಸ್‌, ದೊಡ್ಡಿ ಪ್ರವೀಣ್‌, ಎ.ಜಿ.ಲಕ್ಷ್ಮಮ್ಮ, ಶಿವಪ್ರಸಾದ್‌, ಡಾ.ನಂಜಪ್ಪ, ಲಕ್ಕೂರು ನಾಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next