Advertisement

ಜು.13 ಅಥವಾ 14: ಭೂಮಿಗೆ ಬಂದಪ್ಪಳಿಸಲಿದೆ ಸೌರ ಚಂಡಮಾರುತ!ಫೋನ್ ಸಿಗ್ನಲ್ ಹಾನಿ ಸಾಧ್ಯತೆ

05:38 PM Jul 12, 2021 | Team Udayavani |

ವಾಷಿಂಗ್ಟನ್: ಇಡೀ ಜಗತ್ತು ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಭಾರೀ ಪ್ರಮಾಣದ ಸೂರ್ಯನ ಶಾಖದ ಅಲೆಗಳು ಸೌರ ಚಂಡಮಾರುತದ ರೂಪದಲ್ಲಿ ಮಂಗಳವಾರ ಅಥವಾ ಬುಧವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೂ ಮುನ್ನ ಭಾನುವಾರ ಅಥವಾ ಸೋಮವಾರ ಸೌರ ಚಂಡಮಾರುತ ಭೂಮಿಗೆ ಬಂದಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

Advertisement

ಇದನ್ನೂ ಓದಿ;ದೈನಂದಿನ ಕೋವಿಡ್ ವ್ಯಾಕ್ಸಿನೇಷನ್ ಸರಾಸರಿಯಲ್ಲಿ ಗಣನೀಯ ಇಳಿಕೆ : ಡೇಟಾ

ಆಯಸ್ಕಾಂತೀಯ ಗುಣದ ಚಂಡಮಾರುತ ಎಂದು ಕರೆಯಲ್ಪಡುವ ಇದು ಅತೀ ವೇಗದ ಸೌರ ಮಾರುತವಾಗಿದ್ದು, ಭೂಮಿಯ ಮ್ಯಾಗ್ನೆಟಿಕ್ ವಲಯದ ಮೇಲೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಸೂರ್ಯನ ವಾತಾವರಣದಲ್ಲಿ ರಂಧ್ರವೊಂದು ತೆರೆದಿದ್ದು, ಆ ಮೂಲಕ ಈ ಬಿಸಿ ತಾಪದ ಚಂಡಮಾರುತ ಹೊರಬರುತ್ತಿದ್ದು, ಇದು ಭೂಮಿಯತ್ತ ಬೀಸುತ್ತಿರುವುದಾಗಿ ವಿಜ್ಞಾನಿಗಳು ವಿವರಿಸಿದ್ದಾರೆ. ಈ ಸೌರ ಚಂಡಮಾರುತ ಭೂಮಿಯ ಆಯಸ್ಕಾಂತೀಯ ಕ್ಷೇತ್ರದ ಮೇಲೆ ಅಪ್ಪಳಿಸಿದಲ್ಲಿ ಜಿಪಿಎಸ್, ಮೊಬೈಲ್ ಸಿಗ್ನಲ್ಸ್, ಸೆಟಲೈಟ್ ಟಿವಿ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಸೌರ ಚಂಡಮಾರುತದ ವೇಗ ಗಂಟೆಗೆ 1.6 ಮಿಲಿಯನ್ ಕಿಲೋ ಮೀಟರ್ ವೇಗದಲ್ಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಇನ್ನಷ್ಟು ಉಷ್ಣಗೊಳಿಸಲಿದ್ದು, ಇದರಿಂದಾಗಿ ಉಪಗ್ರಹಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿವರಿಸಿದೆ.

Advertisement

ಸೂರ್ಯನಲ್ಲಿ ನಿರಂತರವಾಗಿ ನಡೆಯುವ ರಾಸಾಯನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದಲೇ ಅದೊಂದು ಉರಿಯುವ ಗೋಳದ ರೂಪದಲ್ಲಿರುತ್ತದೆ. ಸೂರ್ಯನಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಏರುಪೇರಾದರೆ, ಇಂಥ ಸೌರ ಅಲೆಗಳು ಚಂಡ ಮಾರುತದ ರೂಪದಲ್ಲಿ ಏಳುತ್ತವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next