ಉತ್ತರಾಖಂಡ್: ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಮತ್ತು ಬದರಿನಾಥ್ ಪವಿತ್ರ ಚಾರ್ ಧಾಮ್ ಯಾತ್ರೆಯ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ ನೂಕುನುಗ್ಗಲು ಸಂಭವಿಸಿದ ಘಟನೆ ನಡೆದಿದ್ದು, ಯಮುನೋತ್ರಿಗೆ ತೆರಳುವ ಪರ್ವತ ಪ್ರದೇಶದ ಕಾಲ್ನಡಿಗೆ ಹಾದಿಯಲ್ಲಿ ಭಕ್ತರ ದಂಡು ನೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:IPL: ರಿಷಭ್ ಪಂತ್‌ಗೆ ಒಂದು ಪಂದ್ಯ ನಿಷೇಧ; ಆರ್ ಸಿಬಿ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶಾಕ್
ಪರ್ವತ ಪ್ರದೇಶದ ಕಾಲ್ನಡಿಗೆ ದಾರಿಯಲ್ಲಿ ಭಕ್ತರ ಸಮೂಹ ಮುಂದೆ ಸಾಗಲು ಹರಸಾಹಸ ಪಡುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಭಕ್ತರ ದಂಡು ನೆರೆದಿರುವುದು ಅಪಾಯಕ್ಕೆ ಎಡೆಮಾಡಿಕೊಡುವಂತಿತ್ತು.
ವರದಿಯ ಪ್ರಕಾರ, ಭಕ್ತರು ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದು, ಸುಮಾರು ಮೂರು ಗಂಟೆಗಳ ಕಾಲ ಕ್ಯೂನಲ್ಲಿದ್ದಿರುವುದಾಗಿ ತಿಳಿಸಿದೆ. ಯಾವುದೇ ಮುಂಜಾಗ್ರತಾ ಕ್ರಮ ವಹಿಸದಿದ್ದ ಪರಿಣಾಮ ಭಕ್ತರು ಆತಂಕಕ್ಕೆ ಒಳಗಾದ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ.
ಚಾರ್ ಧಾಮ್ ಯಾತ್ರೆಯು ಅಕ್ಷಯ ತೃತೀಯ ದಿನದಂದು ಕೇದಾರನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ದೇವಸ್ಥಾನಗಳ ಬಾಗಿಲು ತೆರೆಯಲಿರುವ ನಿಟ್ಟಿನಲ್ಲಿ ಭಕ್ತರು ಭೇಟಿ ನೀಡಿದ್ದರು.
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪತ್ನಿ ಹಾಗೂ ಇತರ ಗಣ್ಯರು ಕೂಡಾ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.