ಶ್ರೀರಂಗಪಟ್ಟಣ: ರಾಷ್ಟ್ರೀಯ ಕೃಷಿ ನೀತಿ ರೈತ ವಿರೋಧಿ ಕಾಯ್ದೆಗಳ ವಿರೋಧಿಸಿ ರೈತರು, ವಿವಿಧ ಪ್ರಗತಿ ಪರ ಸಂಘಟನೆಗಳು ಶ್ರೀರಂಗಪಟ್ಟಣದ ಕಿರಂಗೂರು ಬನ್ನಿ ಮಂಟಪ ವೃತ್ತದ ಬಳಿ ಹೆದ್ದಾರಿ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘ ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳ ಜೊತೆ ಇತರ ಸ್ಥಳೀಯ ಸಂಘಟನೆಗಳ ಬೆಂಬಲದೊಂಡಿಗೆ ರೈತರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಜನರು ಸೇರಿ, ರಸ್ತೆಯ ಮಧ್ಯದಲ್ಲಿ ಟ್ರಾಕ್ಟರ್, ಜನಜಾನುವಾರುಗಳನ್ನು ಅಡ್ಡಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಡಿಸೆಂಬರ್‌ನಿಂದ ಶಿವಾಜಿ ಸುರತ್ಕಲ್ 2 ಶುರು
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ,ದಲಿತ ಸಂಘಟನೆಯ ಗುರುಪ್ರಸಾದ್ ಕೆರಗೂಡು ಜನವಾದಿ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಮಂಡ್ಯ ರಕ್ಷಣಾ ವೇದಿಕೆಯ ಶಂಕರ್ ಬಾಬು, ಎಐಎಡಬ್ಯೂಯು, ಎಐಕೆಕೆಎಂ ಎಸ್, ಸಿಐಟಿಯು, ಸಿಪಿಐ, ಆರ್ ಕೆಎಸ್ ಕಾರ್ಮಿಕ ಸಂಘಟನೆ, ಮುಖಂಡರು, ಒಕ್ಕಲಿಗ ವೇದಿಕೆ ಅದ್ಯಕ್ಷ ದೇವರಾಜು ಸೇರಿದಂತೆ ಇತರ ಪ್ರಗತಿ ಪರ ಸಂಘಟನೆಯ ನೇತೃತ್ವದಲ್ಲಿ ಧರಣಿ ಪ್ರತಿಭಟನೆ ನಡೆದಿದೆ.