Advertisement

Dombivli: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ, ಭಾರೀ ಅಗ್ನಿ ಅವಘಡ: 7 ಮಂದಿ ಮೃತ್ಯು

12:45 AM May 24, 2024 | Team Udayavani |

 ಥಾಣೆ: ಇಲ್ಲಿನ ಡೊಂಬಿವಲಿಯಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟಗೊಂಡು 7 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ಹಲವರು ಹೊತ್ತಿ ಉರಿಯುತ್ತಿರುವ ಕಾರ್ಖಾನೆಯ ಒಳಗೆ ಸಿಲುಕಿಕೊಂಡಿರುವ ಶಂಕೆಯಿದೆ. ಹೀಗಾಗಿ, ಸಾವಿನ ಸಂಖ್ಯೆ ಹೆಚ್ಚಳವಾಗುವ ಭೀತಿಯಿದೆ.

Advertisement

ಇದನ್ನೂ ಓದಿ:Warning!; ತಾಳ್ಮೆ ಪರೀಕ್ಷಿಸಬೇಡ..ಎಲ್ಲಿದ್ದರೂ ಬಾ: ಪ್ರಜ್ವಲ್ ಗೆ ದೇವೇಗೌಡರ ವಾರ್ನಿಂಗ್

ಡೊಂಬಿವಲಿಯ ಎಂಐಡಿಸಿ 2ನೇ ಹಂತದಲ್ಲಿರುವ ಕಾರ್ಖಾನೆಯಲ್ಲಿ 3 ಬಾರಿ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಫ್ಯಾಕ್ಟರಿಗಳ ಚಾವಣಿಗಳು ಕಿತ್ತು ಹೋಗಿವೆ, ಮನೆಗಳ ಗಾಜಿನ ಕಿಟಕಿಗಳು ಪುಡಿಯಾಗಿವೆ. ಸ್ಫೋಟದ ಸದ್ದು ಕಿಲೋಮೀಟರ್‌ಗಟ್ಟಲೆ ದೂರದವರೆಗೂ ಕೇಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ಘಟನೆ ಬಗ್ಗೆ ವಿಷಾದವಿದೆ, ಈಗಾಗಲೇ ಬಹಳಷ್ಟು ಜನರನ್ನು ಕಾರ್ಖಾನೆಯಿಂದ ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ. ಎನ್‌ಡಿಆರ್‌ಎಫ್, ಟಿಡಿಆರ್‌ಎಫ್ ಹಾಗೂ ಅಗ್ನಿಶಾಮಕದಳಗಳನ್ನೂ ಕಳುಹಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next