Advertisement

ಶಾರ್ಜಾ ಬಹುಮಹಡಿ ಕಟ್ಟಡ ಅಬ್ಕೊ ಟವರ್ ನಲ್ಲಿ ಅಗ್ನಿ ಅವಘಡ !

06:20 PM May 06, 2020 | sudhir |

ದುಬೈ :ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ಶಾರ್ಜಾದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ  ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

Advertisement

ಶಾರ್ಜಾದ ಅಲ್ ನಹದಾ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಒಂದಾದ ಅಬ್ಕೊ ಟವರ್ ನಲ್ಲಿ ಮಂಗಳವಾರ ತಡ ರಾತ್ರಿ ವಸತಿ ಸಮುಚ್ಚಯದ 10ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿದೆ ಇದರಿಂದ ಕೆಲವರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರೆ.

ಸುಮಾರು 48 ಅಂತಸ್ತಿನ ಕಟ್ಟಡ ಇದಾಗಿದ್ದು ಬೆಂಕಿ ಆವರಿಸಿದ ಕೂಡಲೇ ಕಟ್ಟದಲ್ಲಿದ್ದ ನಿವಾಸಿಗಳನ್ನು ರಕ್ಷಿಸಲಾಗಿದೆ, ಗಾಯಗೊಂಡವರನ್ನು ಹತ್ತಿರದ ಆಸ್ಪತೆಗೆ ದಾಖಲಿಸಲಾಗಿದೆ, ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡವೇ ಸುಟ್ಟು ಕರಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next