Advertisement

PM ಮೋದಿ ಅಧಿಕಾರಾವಧಿಯಲ್ಲಿ ಭಾರೀ ಅಭಿವೃದ್ಧಿ: ಮಾರ್ಗನ್‌ ಸ್ಟಾನ್ಲ ವರದಿ

11:02 PM May 31, 2023 | Team Udayavani |

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಒಂದು ದಶಕದ ಒಳಗಾಗಿ ಜಗತ್ತಿನ ಮಹತ್ವದ ಶಕ್ತಿಗಳಲ್ಲಿ ಒಂದಾಗಿ ಹೊರ ಹೊಮ್ಮಿದೆ. ಜತೆಗೆ ವಿಶ್ವದ ಆಗುಹೋಗುಗಳಲ್ಲಿ ತೀರ್ಮಾನ ಪ್ರಕಟಿಸುವ ಪ್ರಮುಖ ದೇಶವಾಗಿದೆ ಎಂದು ಜಾಗತಿಕ ಅಮೆರಿಕದ ಪ್ರಮುಖ ಹಣಕಾಸು ವಿಶ್ಲೇಷಣಾ ಸಂಸ್ಥೆ ಮಾರ್ಗನ್‌ ಸ್ಟಾನ್ಲ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ವಿದೇಶಿ ಬಂಡವಾಳ ಹೂಡಿಕೆದಾರರು ಮತ್ತು ಇತರರು 2014ರ ಬಳಿಕ ಭಾರತದ ಮೇಲೆ ಹೊಂದಿದ್ದ ಭಾವನೆ ಈಗ ದೂರವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಭಾರತ ಯಾವುದೇ ಸಾಧನೆ ಮಾಡಿಲ್ಲ ಎಂಬ ಟೀಕೆಗಳನ್ನು ತಳ್ಳಿ ಹಾಕಿರುವ ಮಾರ್ಗನ್‌ ಸ್ಟಾನ್ಲ , ಏಷ್ಯಾ ಮತ್ತು ಜಗತ್ತಿನ ಬೆಳವಣಿಗೆಯಲ್ಲಿ ಪ್ರಮುಖವಾಗಿರುವ ಭೂಮಿಕೆ ನಿಭಾಯಿಸುತ್ತಿದೆ ಎಂದು ಶ್ಲಾಘಿಸಿದೆ.

2013ರಲ್ಲಿ ಮತ್ತು ಹಾಲಿ ಪರಿಸ್ಥಿತಿಯನ್ನು ಹೋಲಿಕೆ ಮಾಡುವಾಗ ಭಾರಿ ಧನಾತ್ಮಕ ಬದಲಾವಣೆಯ ವ್ಯತ್ಯಾಸ ಕಂಡುಬರುತ್ತಿದೆ. ಹತ್ತು ಪ್ರಧಾನ ವ್ಯತ್ಯಾಸಗಳನ್ನು ಮಾರ್ಗನ್‌ ಸ್ಟಾನ್ಲ ಉಲ್ಲೇಖೀಸಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಫ‌ಲಾನುಭವಿಗಳ ಖಾತೆಗೆ ನೇರವಾಗಿ ನಗದು ವರ್ಗಾವಣೆ, ಮೂಲ ಸೌಕರ್ಯಗಳ ಕ್ಷೇತ್ರದಲ್ಲಿ ಭಾರೀ ಸುಧಾರಣೆ, ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿ ಕಾರ್ಪೊರೇಟ್‌ ತೆರಿಗೆ ವ್ಯವಸ್ಥೆ, ದಿವಾಳಿ ಸಂಹಿತೆ, ಜಿಎಸ್‌ಟಿ ಜಾರಿ ಮತ್ತು ಅದರ ಸಂಗ್ರಹದಲ್ಲಿ ಏರಿಕೆ, ಡಿಜಿಟಲ್‌ ರೂಪದಲ್ಲಿ ವಹಿವಾಟು ಹೆಚ್ಚಳ, ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಹೊಸತಾಗಿರುವ ಕಾನೂನು, ಬಹುರಾಷ್ಟ್ರೀಯ ಕಂಪನಿಗಳ ಸ್ನೇಹಿ ವಾತಾವರಣಗಳು, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ, ಉತ್ಪಾದನೆ ಮತ್ತು ಜಿಡಿಪಿ ಪ್ರಮಾಣದಲ್ಲಿ ಏರಿಕೆಯಲ್ಲಿ ಗಣನೀಯ ಸಾಧನೆ ಮಾಡಲಾಗಿದೆ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next