Advertisement

11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

08:50 AM Oct 23, 2021 | Team Udayavani |

ಹೊಸದಿಲ್ಲಿ: ಉತ್ತರಾಖಂಡದ ಲಂಖಗಾ ಪಾಸ್‌ನಲ್ಲಿ 17,000 ಅಡಿ ಎತ್ತರದಲ್ಲಿ ಭಾರತೀಯ ವಾಯುಪಡೆಯು ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Advertisement

ಅ.18ರಂದು ಭಾರೀ ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪ್ರವಾಸಿಗರು, ಚಾರಣಿಗರು ಮತ್ತು ಗೈಡ್ ಗಳು ಸೇರಿದಂತೆ 17 ಮಂದಿ ಕಣ್ಮರೆಯಾಗಿದ್ದರು. ಲಂಖಗಾ ಪಾಸ್‌ ಗೆ ಹೋಗುವ ಪ್ರದೇಶದಿಂದ ಇಲ್ಲಿಯವರೆಗೆ 11 ಶವಗಳನ್ನು ಹೊರತೆಗೆಯಲಾಗಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯನ್ನು ಉತ್ತರಾಖಂಡದ ಹರ್ಸಿಲ್‌ನೊಂದಿಗೆ ಸಂಪರ್ಕಿಸುವ ಅತ್ಯಂತ ಕಡಿದಾದ ಪಾಸ್‌ ಗಳಲ್ಲಿ ಲಂಖಗಾ ಪಾಸ್ ಒಂದಾಗಿದೆ.

ಇದನ್ನೂ ಓದಿ:ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ಅಕ್ಟೋಬರ್ 20ರಂದು ಅಧಿಕಾರಿಗಳು ಮಾಡಿದ ಎಸ್ ಒಎಸ್ ಕರೆಗೆ ಐಎಎಫ್ ಪ್ರತಿಕ್ರಿಯಿಸಿ ಹರ್ಸಿಲ್ ತಲುಪಲು ಎರಡು ಸುಧಾರಿತ ಲಘು ಹೆಲಿಕಾಪ್ಟರ್ ಗಳನ್ನು ನಿಯೋಜಿಸಿತು. ಅಕ್ಟೋಬರ್ 20ರಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಮೂವರು ಸಿಬ್ಬಂದಿ ಎಎಲ್ ಎಚ್ ಕ್ರಾಫ್ಟ್ ನಲ್ಲಿ ಮಧ್ಯಾಹ್ನ ಗರಿಷ್ಠ 19500 ಅಡಿ ಎತ್ತರದಲ್ಲಿ ಶೋಧ ಮತ್ತು ರಕ್ಷಣೆ ಪ್ರಾರಂಭಿಸಿದ್ದರುಎಂದು ಎನ್ ಡಿಟಿವಿ ವರದಿ ಮಾಡಿದೆ.

ಇನ್ನೂ ಎರಡು ಶವಗಳನ್ನು ಪತ್ತೆ ಮಾಡಲಾಗಿದೆ ಮತ್ತು ಡೋಗ್ರಾ ಸ್ಕೌಟ್ಸ್, 4 ಅಸ್ಸಾಂ ಮತ್ತು ಎರಡು ಐಟಿಬಿಪಿ ತಂಡಗಳ ಜಂಟಿ ಗಸ್ತು ಮೂಲಕ ನಿತಲ್ ತಾಚ್ ಶಿಬಿರಕ್ಕೆ ಮರಳಿ ತರಲಾಗುತ್ತಿದೆ. ಉಳಿದ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧವನ್ನು ಎಎಲ್ಎಚ್ ಸಿಬ್ಬಂದಿ ಶನಿವಾರ ನಡೆಸಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next