Advertisement

ಅಧಿಕಾರದ ಆಸೆಗಾಗಿ ಯಾವತ್ತು  ಕೆಲಸ ಮಾಡಿಲ್ಲ 

04:31 PM May 21, 2022 | Team Udayavani |

ಮಾಗಡಿ: ಕಳೆದ 22 ವರ್ಷದಿಂದ ನಿರಂತರವಾಗಿ ನಾಡಪ್ರಭು ಕೆಂಪೇಗೌಡರ ಹೆಸರನಲ್ಲಿ ಸಮಾಜಮುಖಿ ಸೇವೆ ಮಾಡುತ್ತಿದ್ದೇನೆ. ಅಧಿಕಾರದಆಸೆಗಾಗಿ ಯಾವತ್ತು ಕೆಲಸ ಮಾಡಿಲ್ಲ ಎಂದುಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕ ಎಚ್‌.ಎಂ. ಕೃಷ್ಣಮೂರ್ತಿ ಹೇಳಿದರು.

Advertisement

ತಾಲೂಕಿನ ಹುಚ್ಚಹನುಮೇಗೌಡನ ಪಾಳ್ಯ ಗ್ರಾಮದ ಶ್ರೀಕಾಲಬೈರಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ 22ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ಮದುವೆಗೆ ಚಾಲನೆ ನೀಡಿ ಮಾತನಾಡಿ, ನಾನು ಅಧಿಕಾರದ ಆಸೆಗಾಗಿಬಿಜೆಪಿ ಪಕ್ಷಕ್ಕೆ ಸೇರಿಲ್ಲ, ಬಿಜೆಪಿಯಲ್ಲಿ ಯಾರಿಗೆಟಿಕೆಟ್‌ ಕೊಡುತ್ತಾರೆಂಬುದು ಕಾತರಿಯಿಲ್ಲ. ರಾಜಕೀಯವಾಗಿ ಬೆಳೆಯಲು ಭಗವಂತನ ಪ್ರೇರಣೆಬೇಕು. ಯಾರಿಗೆ ಟಿಕೆಟ್‌ ಸಿಕ್ಕಿದ್ದರೂ ನಾನು ಬಿಜೆಪಿಪರವಾಗಿಯೇ ದುಡಿಯುತ್ತೇನೆ. 22 ವರ್ಷದಿಂದಮಾಗಡಿಯಲ್ಲಿ ಸಾಮೂಹಿಕ ಮದುವೆ, ಕೆಂಪೇಗೌಡಜಯಂತಿ, ಆರೋಗ್ಯ ಶಿಬಿರ, ಅಕ್ಕಿ ವಿತರಣೆಸೇರಿದಂತೆ ಸಾಕಷ್ಟು ಸಮಾಜ ಸೇವೆಯನ್ನುಮಾಡಿಕೊಂಡು ಬಂದಿದ್ದೇನೆ. ನಾನು ಹುಟ್ಟಿದಊರಿನ ಋಣ ತೀರಿಸಲು ಈ ಕೆಲಸಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದರು.

ಜೂ.23ಕ್ಕೆ ಕೆಂಪೇಗೌಡ ಜಯಂತಿ: ಜೂ.23ರಂದು ಮಾಗಡಿ ಕೋಟೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಕ್ರಮದವಿವರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ.ಕಾರ್ಯಕ್ರಮಕ್ಕೆ ಮಠಾಧೀಶರು, ಗಣ್ಯರನ್ನು ಕರೆಸಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಬೃಹತ್‌ಆರೋಗ್ಯ ಶಿಬಿರ ಏರ್ಪಡಿಸಿ, ಕೆಂಪೇಗೌಡರ ಗತಇತಿಹಾಸ ಒಳಗೊಂಡ ಹಾಡಿನ ಚಿತ್ರೀಕರಣವನ್ನುಮಾಗಡಿಯಲ್ಲಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಸೇವೆ ಮಾಡುವ ಶಕ್ತಿ ಕರುಣಿಸಲಿ: ಚಕ್ರಬಾವಿ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 22 ವರ್ಷದಿಂದ ನಿರಂತರವಾಗಿ ಸಾಮೂಹಿಕ ಮದುವೆ, ಆರೋಗ್ಯ ಶಿಬರ, ಕೆಂಪೇಗೌಡ ಜಯಂತಿ ಮಾಡುವ ಮೂಲಕ ಮಾದರಿಯಾಗಿ ಮಾಡಿದ್ದಾರೆ. ಕೊರೊನಾದಲ್ಲಿ ಸಾಮೂಹಿಕ ಮದುವೆಯಾಗಿರಲಿಲ್ಲ. ಈಗ ಸರಳವಾಗಿ ಆಗಿದ್ದು, ಮುಂದೆ ದೊಡ್ಡ ಮಟ್ಟದಲ್ಲಿ ಮಾಡುವ ದೊಡ್ಡ ಶಕ್ತಿಯನ್ನು ದೇವರು ಕರುಣಿಸಲಿ, ಜೊತೆಗೆ ರಾಜಕೀಯವಾಗಿಯೂ ಎತ್ತರಕ್ಕೆ ಬರುವಂತಾಗಲಿ ಎಂದು ಹೇಳಿದರು.

ದಾಪಂತ್ಯಕ್ಕೆ ಕಾಲಿಟ್ಟ 3 ಜೋಡಿ: ಶ್ರೀಕಾಲಬೈರವೇಶ್ವರ ಸ್ವಾಮಿ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ಮದುವೆದಲ್ಲಿ 3 ಜೋಡಿ ದಾಪಂತ್ಯ ಜೀವನಕ್ಕೆಕಾಲಿಟ್ಟರು. ಕಾಲಬೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

Advertisement

ಚಕ್ರಭಾವಿ ಮಠದ ಶಿವಚಾರ್ಯಸ್ವಾಮೀಜಿ, ಕಾಲಬೈರವೇಶ್ವರ ಸ್ವಾಮಿ ಟ್ರಸ್ಟ್‌ ಅಧ್ಯಕ್ಷಗಂಗಾಧರಯ್ಯ, ಎಚ್‌.ಎಂ.ಕೃಷ್ಣಮೂರ್ತಿ, ಪುಷ್ಪ ಕೃಷ್ಣಮೂರ್ತಿ, ಪುತ್ರಿ ದೀಪು ಅಜಯ್‌, ಬಿಜೆಪಿತಾಲೂಕು ಅಧ್ಯಕ್ಷ ಬಿ.ಎಂ.ಧನಂಜಯ್ಯ, ಯುವಮುಖಂಡ ಕೆ.ಆರ್‌.ಪ್ರಸಾದ್‌ ಗೌಡ, ಗೌಡರ ಪಾಳ್ಯಗಂಗಾಧರ್‌, ಚೋಳನಾಯಕನಹಳ್ಳಿ ಸಿದ್ದರಾಜು,ದೊಡ್ಡಿ ಗೋಪಿ, ಮೋಹನ್‌, ಎನ್‌ಇಎಸ್‌ ಆನಂದ್‌,ಜ್ಯೋತಿಪಾಳ್ಯ ಸುರೇಶ್‌, ಲಕ್ಷ್ಮಣ್‌, ರಂಗಸ್ವಾಮಿ, ದೊಡ್ಡಿ ಗೋಪಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next