ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 21ನೇ ವರ್ಷದ (ಸಪ್ತಪದಿ) ಸಾಮೂಹಿಕ ವಿವಾಹವು ಮಾ. 17ರಂದು ಜರಗಲಿದೆ.
ಸರಕಾರದ ಆದರ್ಶ ವಿವಾಹ ಯೋಜನೆಯಡಿ ವಧುವಿಗೆ ದೊರೆಯುವ ಪ್ರೋತ್ಸಾಹ ಧನ ಪಡೆಯಲು ಅನುಕೂಲ ವಾಗುವಂತೆ ಅಂದೇ ವಿವಾಹ ನೋಂದಣಿಗೆ ಕ್ರಮ ಕೈಗೊಳ್ಳಲಾಗುವುದು.
ಮದುವೆಯಾಗ ಬಯಸುವವರು ದೇವಸ್ಥಾನದ ಕಚೇರಿಯಲ್ಲಿ ಮಾ. 4ರ ಒಳಗೆ ಹೆಸರನ್ನು ನೋಂದಾಯಿಸಬೇಕೆಂದು ಆನುವಂಶಿಕ ಮೊಕ್ತೇಸರ ಎಚ್. ಧನಂಜಯ ಶೆಟ್ಟಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ಕೊಟ್ಟಾರಗಸ್ತಿ ತಿಳಿಸಿದ್ದಾರೆ. ಅರ್ಜಿ ಹಾಗೂ ಮಾಹಿತಿಗಾಗಿ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಅತ್ತೂರು ಉತ್ಸವದಲ್ಲಿ ಜನಸಾಗರ: ಇನ್ನು ಒಂದು ದಿನ ಮಾತ್ರ ಬಾಕಿ