Advertisement

ಅಷ್ಟಾಂಗ ಯೋಗದಿಂದ ಆರೋಗ್ಯ ವೃದ್ಧಿ

11:26 AM Jun 17, 2019 | Naveen |

ಮಸ್ಕಿ: ಜೀವಾತ್ಮ ಮತ್ತು ಪರಮಾತ್ಮನಲ್ಲಿ ಏಕೀಕರಣಗೊಳ್ಳುವುದಕ್ಕೆ ಯೋಗ ಎನ್ನುತ್ತಾರೆ. ಆರೋಗ್ಯಕರ ಜೀವನಕ್ಕಾಗಿ ಋಷಿಮುನಿಗಳು ಅಷ್ಟಾಂಗ ಯೋಗ ಪದ್ಧತಿ ಕಲಿಸಿದ್ದಾರೆ. ಇವುಗಳನ್ನು ಪಾಲಿಸಿದರೆ ಮನುಷ್ಯ ಆರೋಗ್ಯಕರ ಜೀವನ ಸಾಗಿಸಬಹುದು ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.

Advertisement

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ರವಿವಾರ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶಾರದಾ ಪ್ರಾಥಮಿಕ, ಪ್ರೌಢಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಷ್ಟಾಂಗ ಯೋಗದಲ್ಲಿ ತೊಡಗಿದರೆ ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ನಡೆಸಬಹುದು. ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.

ಡಾ| ಶಿವಶರಣಪ್ಪ ಇತ್ಲಿ ಮಾತನಾಡಿ, ಮನುಷ್ಯ ಆರೋಗ್ಯವಾಗಿರಬೇಕಾದರೆ ಮೈತುಂಬ ಕೆಲಸವಿರಬೇಕು. ಹೊಟ್ಟೆ ತುಂಬ ಊಟ ಮಾಡಬೇಕು ಮತ್ತು ಕಣ್ತುಂಬ ನಿದ್ದೆ ಮಾಡಿದರೆ ಸಾಕು ಆರೋಗ್ಯವಾಗಿರುತ್ತಾನೆ ಎಂದರು.

ಆಯುರ್ವೇದ ವೈದ್ಯ ಪ್ರವೀಣ ಸಾನಬಾಳ ಮಾತನಾಡಿ, ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಯೋಗ ವಿದ್ಯೆ ಇದು ಪ್ರಪಂಚದ ಎಲ್ಲ ಕಡೆ ಪ್ರಾಮುಖ್ಯತೆ ಪಡೆದಿದೆ. ಆರೋಗ್ಯದ ಗುಟ್ಟನ್ನು ನಮ್ಮ ಋಷಿಮುನಿಗಳು ಯೋಗದಲ್ಲಿ ಕಂಡುಕೊಂಡಿದ್ದು ಅವುಗಳ ಬಳಕೆ ಕುರಿತು ತಿಳಿ ಹೇಳಿದ್ದಾರೆ ಎಂದರು.

Advertisement

ಡಾ| ಬಿ.ಎಚ್.ದಿವಟರ, ಯೋಗಾಚಾರ್ಯ ಆನಂದ ಪತ್ತಾರ, ಮಹಾಂತೇಶ ಬ್ಯಾಳಿ ಮಾತನಾಡಿದರು.

ಪ್ರಕಾಶ ಧಾರಿವಾಲ, ಪತಂಜಲಿ ಸಮಿತಿ ಅಧ್ಯಕ್ಷ ಸುಕುಮುನಿಯಪ್ಪ ನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ದೇಶಮುಖ, ಕಸ್ತೂರಿ ಇತ್ಲಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ನಾಗರಾಜ ಕಂಬಾರ, ವರ್ತಕ ಶಶಿಕಾಂತ ಬ್ಯಾಳಿ, ಡಾ| ಮಲ್ಲಿಕಾರ್ಜುನ ಇತ್ಲಿ, ಡಾ| ಶಿವಪ್ರಸಾದ ಪತ್ತಾರ, ಡಾ| ಮಲ್ಲಿಕಾರ್ಜುನ ಶೆಟ್ಟಿ, ಶಿವರಾಜ ಯಂಬಲದ ಇದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸಸಿ ವಿತರಿಸಲಾಯಿತು. ಸುಮಾರು 200 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next