ಮಸ್ಕಿ: ಕಬ್ಬಿಣ ತುಂಬಿದ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಅಂತರಗಂಗಿ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಮುದಗಲ್ ಗ್ರಾಮದ ನಿವಾಸಿ ಶೀಲಪ್ಪ ಮೃತ ಚಾಲಕ ಎಂದು ಗುರುತಿಸಲಾಗಿದೆ.
ಬೆಳಗಾವಿಯಿಂದ ಬಳ್ಳಾರಿಗೆ ಕಬ್ಬಿಣ ರಾಡು ತುಂಬಿಕೊಂಡು ಹೊರಟಿದ್ದ ಲಾರಿ, ಸುಮಾರು ರಾತ್ರಿ 2 ಗಂಟೆ ವೇಳೆಗೆ ಅಂತರಗಂಗಿ ಬಳಿ ಪಲ್ಟಿಯಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿ: ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಬಂಧನ
Related Articles
ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಸಿದ್ಧರಾಮ ಬಿದರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜೆಸಿಬಿಯ ಮೂಲಕ ಲಾರಿಯನ್ನು ಮೇಲಕ್ಕೆತ್ತಿ, ಲಾರಿಯಲ್ಲಿ ಸಿಲುಕಿದ್ದ ಚಾಲಕ ಮೃತದೇಹವನ್ನು ಹೊರಕ್ಕೆ ತರಲಾಯಿತು.