ಮಸ್ಕಿ: ಈಶಾನ್ಯ ಸಾರಿಗೆಯ ಯಾದಗಿರಿ ಡಿಪೋದ ಬಸ್ ಹಾಗೂ ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಸೋಮವಾರ(ಡಿ.5) ತಡರಾತ್ರಿ ತಾಲೂಕಿನ ಗುಡದೂರು ಕಾಲುವೆ ಬಳಿ ನಡೆದಿದೆ.
ಕರ್ನೂಲ್ ಜಿಲ್ಲೆಯ ನಂದ್ಯಾಳದ ನಾಗರಾಜ (25), ಸೀನು (30), ಜಯಪಾಲ (30) ಮೃತಪಟ್ಟಿದ್ದಾರೆ. ಹಾಗೂ ಗಾಯಗೊಂಡವನು ಶ್ರೀಕಾಂತ ಎಂದು ಗುರುತಿಸಲಾಗಿದೆ.
ಆಂಧ್ರ ಮೂಲದ ಭತ್ತ ಕಟಾವು ಯಂತ್ರದ ಮಾಲೀಕರು ಹಾಗೂ ಕಾರ್ಮಿಕರು ಬೈಕ್ ನಲ್ಲಿ ಗುಡದೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಬಸ್ ಬೆನ್ನು ಹತ್ತಿದ ಪಿಎಸ್ಐ ಸಿದ್ದರಾಮ ಬಿದರಾಣಿ, ಲಿಂಗಸುಗೂರಲ್ಲಿ ಬಸ್ ಹಿಡಿದು ಕಚೇರಿ ತರಲಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಿವಕುಮಾರ ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.