ಕಾಸರಗೋಡು: ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ಯತ್ನಗಳ ಅಂಗವಾಗಿ ಕುಟುಂಬಶ್ರೀ ಘಟಕ ಗಳು ಜಿಲ್ಲೆಯಾದ್ಯಂತ ಹತ್ತಿಯ ಮಾಸ್ಕ್, ಹ್ಯಾಂಡ್ ವಾಶ್, ಸಾನಿಟೈಸರ್ ಇತ್ಯಾದಿಗಳ ತಯಾರಿ ಕುಟುಂಬಶ್ರೀ ವತಿಯಿಂದ ಜರಗುತ್ತಿದೆ.
ಕುಟುಂಬಶ್ರೀಯ 25 ಘಟಕಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ. ಘಟಕ ವೊಂದರಿಂದ ದಿನಕ್ಕೆ 450ರಿಂದ 500 ಹತ್ತಿಯ ಮಾಸ್ಕ್ ತಯಾರಿಸಲಾಗುತ್ತಿದೆ. 2 ಲೇಯರ್, 3 ಲೇಯರ್‌ಗಳ ಮಾಸ್ಕ್ ಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ.
15ರೂ. ಮತ್ತು 20 ರೂ.ನಂತೆ ಸಾರ್ವಜನಿಕರಿಗೆ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಬಿಸಿನೀರಲ್ಲಿ ಅದ್ದಿ ಅಣುಮುಕ್ತಗೊಳಿಸುವ ರೀತಿ ತಯಾರಿಸಲಾಗಿದ್ದು, ಈ ನಿಟ್ಟಿನಲ್ಲಿ ಮರು ಬಳಕೆಗೆ ಅವಕಾಶವಿದೆ.
ಜಿಲ್ಲಾ ಧಿಕಾರಿ ಕಚೇರಿ, ಗ್ರಾ. ಪಂ., ನಗರಸಭೆ, ಕುಟುಂಬಶ್ರೀ ಕಚೇರಿಗಳಲ್ಲಿ ಆರಂಭಿಸ ಲಾಗುವ ಕೌಂಟರ್‌ಗಳಲ್ಲಿ ಸಾರ್ವ ಜನಿಕರಿಗೆ ಈ ಉತ್ಪನ್ನಗಳು ಲಭ್ಯವಾಗಲಿವೆ. 40 ರೂ.ಗೆ ಹ್ಯಾಂಡ್ ವಾಶ್ 200 ಮಿ.ಲೀ. ಹ್ಯಾಂಡ್ ವಾಶ್ ಇಲ್ಲಿ 40 ರೂ. ಮತ್ತು 200 ಮಿ.ಲೀ. ಸಾನಿಟೈಸರ್ 135 ರೂ. ಬೆಲೆಗೆ ಲಭ್ಯವಿರುವುವು.
ಚೆಂಗಳ, ಚೆರುವತ್ತೂರು ಕುಟುಂಬಶ್ರೀ ಘಟಕಗಳು ಈ ಉತ್ಪನ್ನಗಳನ್ನು ತಯಾರಿಸುತ್ತಿವೆ.
ಇವನ್ನು ಇನ್ನಷ್ಟು ಕಡೆ ವಿಸ್ತರಣೆಗೊಳಿಸುವ ಉದ್ದೇಶವಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.