ಚಾಂಪಿಯನ್ ಮೇರಿ ಕೋಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement
ಕ್ರೀಡೆಯಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳು ಈ ಹುದ್ದೆಯಲ್ಲಿರುವಂತಿಲ್ಲ ಎಂಬ ಕ್ರೀಡಾನೀತಿಯ ಕಾರಣ ಅವರು ಈ ನಿರ್ಧಾರ ಮಾಡಿದ್ದಾರೆ. ಇದನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಕೂಡ ಹೌದೆಂದಿದ್ದಾರೆ. ನಾನು ಈ ಹುದ್ದೆಯನ್ನು ಬಯಸಿ ಹೋಗಿರಲಿಲ್ಲ, ಅದನ್ನು ಅವರಾಗಿಯೇ ಒತ್ತಾಯಿಸಿ ನೀಡಿದ್ದರಿಂದ ಒಪ್ಪಿಕೊಂಡಿದ್ದೆ.ಆ ಸಂದರ್ಭದಲ್ಲಿ ನಾನು ಹುದ್ದೆಯಲ್ಲಿರಬಹುದೇ ಎಂದೂ ಕೇಳಿದ್ದೆ. ಆದರೆ ಈಗ ಅನಗತ್ಯ ವಿವಾದಕ್ಕೆ ತಾನು ಸಿದ್ಧಳಿಲ್ಲ ಎಂದು ಮೇರಿ ಸ್ಪಷ್ಟಪಡಿಸಿದ್ದಾರೆ.