Advertisement

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ ಮೇರಿ ಕೋಮ್

04:01 PM May 11, 2022 | Team Udayavani |

ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಈ ವರ್ಷ ಜುಲೈನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ್ದು, ಆರು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರ ಸಂಪೂರ್ಣ ಗಮನ ಈಗ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಮೇಲಿದೆ.

Advertisement

ಸಾಮಾಜಿಕ ಮಾಧ್ಯಮ ಕೂ ನಲ್ಲಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡು, ಮಾಡು ಇಲ್ಲವೇ ಮಡಿ… ಪ್ರಯತ್ನ ಅಥವಾ ಯಾವುದೇ ಶಾರ್ಟ್‌ಕಟ್ ಇಲ್ಲಿಲ್ಲ.. ಕೇವಲ ಕಠಿಣ ಪರಿಶ್ರಮ ಎಂದು ಬರೆದುಕೊಂಡಿದ್ದಾರೆ.

https://www.kooapp.com/koo/mcmarykom/34da641d-0b25-4795-b662-14e32aa9ba6f

ಬಾಕ್ಸಿಂಗ್ ಅಭ್ಯಾಸದ ನಂತರ, ಮೇರಿ ಕೋಮ್ ಮಧ್ಯಾಹ್ನ ಜಿಮ್‌ಗೆ ಹೋಗುತ್ತಾರೆ. ಆಕೆ ತನ್ನ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ತೂಕದ ವ್ಯಾಯಾಮಗಳಾದ ಪುಷ್-ಅಪ್‌ಗಳು ಮತ್ತು ಸಿಟ್-ಅಪ್‌ಗಳು ಮತ್ತು ಭಾರ ಎತ್ತುವಿಕೆಯೊಂದಿಗೆ ತನ್ನ ಸ್ನಾಯುಗಳನ್ನು ದೃಢವಾಗಿಡಲು ಈ ಸಮಯವನ್ನು ಬಳಸುತ್ತಿದ್ದಾರೆ. ಈ ತರಬೇತಿಯ ನಂತರ, ಅವರು ತನ್ನ ಬಾಕ್ಸಿಂಗ್ ಅಭ್ಯಾಸಕ್ಕೆ ಮರಳುತ್ತಾರೆ.

ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಈಶಾನ್ಯ ಮಹಿಳಾ ಫುಟ್‌ಬಾಲ್ ಲೀಗ್‌ನ ಉದ್ಘಾಟನೆ ಸಂದರ್ಭದಲ್ಲಿ, ಈಶಾನ್ಯ ಮಹಿಳೆಯರಿಗಾಗಿ ಈ ಲೀಗ್‌ ಆಯೋಜಿಸಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದ್ದರು. ಇದು ಈಶಾನ್ಯ ಭಾಗದ ಮಹಿಳಾ ಕ್ರೀಡಾಪಟುಗಳಿಗೆ ವೇದಿಕೆ ಒದಗಿಸಿದ್ದು, ಫುಟ್ಬಾಲ್ ಕ್ಷೇತ್ರದಲ್ಲಿ ತಮ್ಮ ಶಕ್ತಿಯನ್ನು ತೋರಿಸಬಹುದಾಗಿದೆ ಎಂದಿದ್ದರು. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಎಲ್ಲಾ ಹೆಣ್ಣುಮಕ್ಕಳು ಮುಂದೆ ಬಂದು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಮನವಿ ಮಾಡಿದ್ದರು.

Advertisement

 

ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಸಂಸ್ಕೃತಿ
ದೇಶದಲ್ಲಿ ಕ್ರೀಡೆಯ ಮೂಲಸೌಕರ್ಯ ಕುರಿತು ಮಾತನಾಡಿದ್ದ ಅವರು, ಈಗ ಸರ್ಕಾರದ ಜೊತೆಗೆ ಖಾಸಗಿ ವಲಯವೂ ಸಾಕಷ್ಟು ಸಹಾಯ ಮಾಡುತ್ತಿದೆ. ಈ ಕಾರಣಕ್ಕಾಗಿ, ದೇಶದಲ್ಲಿ ಕ್ರೀಡಾ ಸಂಸ್ಕೃತಿಯು ವೇಗವಾಗಿ ಬೆಳೆಯುತ್ತಿದೆ. ಅರಿವು ಹೆಚ್ಚುತ್ತಿದೆ, ಇದರಿಂದಾಗಿ ಅವಕಾಶಗಳು ವೇಗವಾಗಿ ಸೃಷ್ಟಿಯಾಗುತ್ತಿವೆ. ಒಂದು ಕಾಲದಲ್ಲಿ ಹಲವು ಸಮಸ್ಯೆಗಳಿದ್ದವು ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಒಂದು ಕಾಲದಲ್ಲಿ ವಿಶ್ವಚಾಂಪಿಯನ್ ಆಗಿದ್ದರೂ ಸ್ಲೀಪರ್ ನಲ್ಲಿಯೇ ಪ್ರಯಾಣಿಸಬೇಕಾಗಿತ್ತು ಆದರೆ ಇಂದು ಸೌಲಭ್ಯಗಳು ಹೆಚ್ಚಿವೆ ಎಂದಿದ್ದರು. ಅಂತಹ ವೇದಿಕೆಗಳು ಲಭ್ಯವಿದ್ದರೆ, ಖಂಡಿತವಾಗಿಯೂ ನಮ್ಮ ದೇಶವು ಕ್ರೀಡಾ ಕ್ಷೇತ್ರದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next