Advertisement

ಸ್ವಿಫ್ಟ್ ಎಸ್‌-ಸಿಎನ್‌ಜಿ ಬಿಡುಗಡೆ;1 ಕೆ.ಜಿ. ಸಿಎನ್‌ಜಿಗೆ 30.90ಕಿ.ಮೀ ಮೈಲೇಜ್‌

07:00 PM Aug 13, 2022 | Team Udayavani |

ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಎಸ್‌-ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ವಿಎಕ್ಸ್‌ಐ ಮತ್ತು ಜೆಡ್‌ಎಕ್ಸ್‌ಐ ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ. ಕಾರಿನಲ್ಲಿ 1.2 ಲೀಟರ್‌ ಕೆ ಸೀರಿಸ್‌ ಡುಯಲ್‌ ಜೆಟ್‌, ಡುಯಲ್‌ ವಿವಿಟಿ ಇಂಜಿನ್‌ ಇದೆ. ಸಿಎನ್‌ಜಿ ಜತೆ ಪೆಟ್ರೋಲ್‌ ಮೋಡ್‌ ಕೂಡ ಇರುವ ಕಾರು, ಸಿಎನ್‌ಜಿ ಬಳಕೆ ಮಾಡುವಾಗ 1ಕೆ.ಜಿ. ಸಿಎನ್‌ಜಿಯಲ್ಲಿ 30.90 ಕಿ.ಮೀ. ಸಾಗುತ್ತದೆ ಎಂದು ಸಂಸ್ಥೆ ಹೇಳಿದೆ.

Advertisement

ಕೆಂಪು, ನೀಲಿ, ಕಿತ್ತಳೆ(ಆರೆಂಜ್‌), ಬಿಳಿ, ಕಂದು ಮತ್ತು ಬೆಳ್ಳಿಯ ಬಣ್ಣದಲ್ಲಿ ಕಾರು ಲಭ್ಯ. ಸ್ವಿಫ್ಟ್ ಕಾರಿನಂತೆಯೇ ಎಲ್ಲ ವಿಶೇಷ ಸೌಲಭ್ಯಗಳು ಈ ಕಾರಿನಲ್ಲಿವೆ.

ವಿಎಕ್ಸ್‌ಐ ವೇರಿಯೆಂಟ್‌ ಬೆಲೆ 7.77 ಲಕ್ಷ ರೂ.(ಎಕ್ಸ್‌ ಶೋ ರೂಂ) ಇದ್ದರೆ ಜೆಡ್‌ಎಕ್ಸ್‌ಐ ಬೆಲೆ 8.45 ಲಕ್ಷ ರೂ.(ಎಕ್ಸ್‌ ಶೋ ರೂಂ) ಇದೆ.

Advertisement

Udayavani is now on Telegram. Click here to join our channel and stay updated with the latest news.

Next