Advertisement

ರಿಯಾಯಿತಿ ಅನ್ವಯ: ಮಾರುತಿ ಸುಜುಕಿ ಕಾರು ಉತ್ಪಾದನೆ ಹೆಚ್ಚಳ

01:17 PM Dec 07, 2020 | Nagendra Trasi |

ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಕಳೆದ ತಿಂಗಳು ಉತ್ಪಾದನೆಯಲ್ಲಿ ಶೇ.6ರಷ್ಟು ಹೆಚ್ಚಿನ ಸಾಧನೆ ಮಾಡಿದೆ. 2019ರ ನವೆಂಬರ್‌ನಲ್ಲಿ ಉತ್ಪಾದಿಸಿದ್ದ ಕಾರುಗಳಿಂತ ಪ್ರಸಕ್ತ ವರ್ಷ ಕೊಂಚ ಹೆಚ್ಚಾಗಿದೆ.

Advertisement

ಹಾಲಿ ಸಾಲಿನಲ್ಲಿ ಒಟ್ಟು 1,50,221 ವಾಹನಗಳನ್ನು ಉತ್ಪಾದಿಸಿದ್ದರೆ, ಕಳೆದ ವರ್ಷ 1,41, 834 ವಾಹನಗಳನ್ನು ಉತ್ಪಾದಿಸಿತ್ತು. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಕಂಪೆನಿ 1,46,577 ವಾಹನಗಳನ್ನು ಉತ್ಪಾದಿಸಿತ್ತು ಎಂದು ತಿಳಿಸಿದೆ.

65 ಸಾವಿರ ರೂ. ವರೆಗೆ ರಿಯಾಯಿತಿ: ಟಾಟಾ ಮೋಟರ್ಸ್‌ ವರ್ಷಾಂತ್ಯದ ಹಿನ್ನೆಲೆಯಲ್ಲಿ ಗ್ರಾಹಕ ರಿಗಾಗಿ 65 ಸಾವಿರ ರೂ.ಗಳ ವರೆಗೆ ರಿಯಾಯಿತಿ
ಪ್ರಕಟಿಸಿದೆ. ಬಿಎಸ್‌-6 ಮಾದರಿಯ ಆಯ್ದ ಕಾರುಗಳ ಮೇಲೆ ಈ ರಿಯಾಯಿತಿ ಅನ್ವಯವಾಗುತ್ತದೆ ಎಂದು ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ:ಕ್ಯಾರೆಟ್‌ ವಿದ್‌ ಖರ್ಜೂರ ಜ್ಯೂಸ್‌…ಆರೋಗ್ಯವೃದ್ಧಿ ಜ್ಯೂಸ್

ಟಿಯಾಗೋ, ಟಿಗೋರ್‌, ನೆಕ್ಸಾನ್‌, ಹ್ಯಾರಿಯರ್‌ ರಿಯಾಯಿತಿ ವ್ಯಾಪ್ತಿಗೆ ಬರುತ್ತವೆ. ಈ ತಿಂಗಳ 1 ರಿಂದ ರಿಯಾಯಿತಿ ಶುರು ವಾಗಿದ್ದು, 31ರ ವರೆಗೆ ಲಭ್ಯವಿದೆ.

Advertisement

ನಿಯಮ ಒಪ್ಪದಿದ್ದರೆ ವಾಟ್ಸಾಪ್‌ ಡಿಲೀಟ್‌!
ನವದೆಹಲಿ:ಮುಂದಿನ ವರ್ಷ ವಾಟ್ಸಾಪ್‌ ತನ್ನ ಸೇವಾ ನಿಯಮಗಳಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದು, “ನಿಯಮಗಳಿಗೆ ಒಪ್ಪಿಗೆ ಸೂಚಿಸದ’ ಬಳಕೆದಾರರ
ಖಾತೆಯನ್ನು ಡಿಲೀಟ್‌ ಮಾಡಲು ಸಂಸ್ಥೆ ಸೂಚಿಸಲಿದೆ.

ಪ್ರಸ್ತುತ ವಾಟ್ಸಾಪ್‌ ಡೌನ್‌ಲೋಡ್‌ ಮಾಡಿದಾಗ ಪ್ರತಿ ಬಳಕೆದಾರನಿಗೂ ಆರಂಭದಲ್ಲಿ “ಸ್ವಾಗತ’ಕೋರಿ, ಸೇವಾ ನಿಯಮಗಳನ್ನು ತಿಳಿಸಿ, “ಅಗ್ರೀ ಆ್ಯಂಡ್‌ಕಂಟಿನ್ಯೂ’ ಎಂಬ ಆಯ್ಕೆ ನೀಡಲಾಗುತ್ತಿದೆ. ಇದನ್ನುಕ್ಲಿಕ್ಕಿಸಿದರಷ್ಟೇ ವಾಟ್ಸಾಪ್‌ ನಲ್ಲಿ ಮುಂದುವರಿಯಲು ಅವಕಾಶ ಲಭಿಸುತ್ತಿದೆ.

ನಿಯಮ ಒಪ್ಪದಿದ್ದರೆ?: 2021ರ ಫೆ.8ರಿಂದ ವಾಟ್ಸಾಪ್‌ “ಅಗ್ರೀ’ ಅಥವಾ”ಡೋಂಟ್‌ ಅಗ್ರೀ’- ಈ ಎರಡೂ ಆಯ್ಕೆಗಳನ್ನೂ ಪರಿಚಯಿಸುತ್ತಿದೆ. “ಡೋಂಟ್‌ ಅಗ್ರೀ’ ಕ್ಲಿಕ್ಕಿಸುವ ಬಳಕೆದಾರರಿಗೆ ಸೆಟ್ಟಿಂಗ್ಸ್‌ ಮೂಲಕ ತಮ್ಮಖಾತೆಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡಲು ಸೂಚಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next