ಹೊಸದಿಲ್ಲಿ: ಮಾರುತಿ ಸುಜುಕಿ ಸಂಸ್ಥೆಯು ತನ್ನ ಎಲ್ಲ ಮಾದರಿಗಳ ಕಾರುಗಳ ಬೆಲೆಯನ್ನು ಶೇ. 0.9ರಿಂದ ಶೇ. 1.9ರಷ್ಟು ಏರಿಕೆ ಮಾಡಿದೆ. ಈ ಬೆಲೆ ಏರಿಕೆ ಎ. 18ರಿಂದಲೇ ಜಾರಿಯಾಗಿದೆ.
ಆಲ್ಟೋದಿಂದ ತೊಡಗಿ ಎಲ್ಲ ಮಾಡೆಲ್ ಕಾರುಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಕಾರು ಉತ್ಪಾದನೆಗೆ ಅಗತ್ಯವಾದ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದರಿಂದ ಈ ಬೆಲೆ ಏರಿಕೆ ಮಾಡಿರುವುದಾಗಿ ಹೇಳಲಾಗಿದೆ.
ಸಂಸ್ಥೆಯು 2021ರ ಜನವರಿಯಿಂದ 2022ರ ಮಾರ್ಚ್‌ವರೆಗೆ ಕಾರುಗಳ ಬೆಲೆಯಲ್ಲಿ ಒಟ್ಟು ಶೇ. 8.8 ಏರಿಕೆ ಮಾಡಿದೆ.
ಇದನ್ನೂ ಓದಿ:ಮಲ್ಟಿ ಲೆವೆಲ್ ಮಾರ್ಕೆಟಿಂಗ್:ಇಡಿಯಿಂದ ಆ್ಯಮ್‌ವೇ ಇಂಡಿಯಾಗೆ ಸೇರಿದ 757 ಕೋ. ರೂ ಆಸ್ತಿ ಜಪ್ತಿ
ಕಳೆದ ವಾರ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆಯು ಕಾರುಗಳ ಬೆಲೆಯಲ್ಲಿ ಶೇ. 2.5 ಏರಿಕೆ ಮಾಡಿತ್ತು. ಹಾಗೆಯೇ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಕೂಡ ಎ. 1ರಿಂದ ಕಾರುಗಳ ಬೆಲೆಯಲ್ಲಿ ಶೇ. 4 ಏರಿಕೆ ಮಾಡಿದೆ.
ಲಕ್ಸುರಿ ಕಾರುಗಳ ಸಂಸ್ಥೆಯಾಗಿರುವ ಆಡಿ, ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ಕೂಡ ಕಾರುಗಳ ಬೆಲೆ ಏರಿಕೆ ಮಾಡಿವೆ.