ನವದೆಹಲಿ: ಭಾರತದ ಸುಪ್ರಸಿದ್ಧ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ಎಲ್ಲಾ ವಾಹನಗಳ ಮಾದರಿಗಳ ಬೆಲೆಯನ್ನು ಸರಾಸರಿ ಶೇ.1.1ರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದು, ಜ.16ರಿಂದಲೇ ಪರಿಷ್ಕೃತ ಬೆಲೆ ಜಾರಿಯಾಗಿದೆ.
Advertisement
ಸಂಸ್ಥೆಯ ನಿರ್ವಹಣೆ ವೆಚ್ಚ ಹಾಗೂ ಹಣದುಬ್ಬರದ ಪ್ರಭಾವದಿಂದಾಗಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ವಾಹನಗಳ ಬೆಲೆಯನ್ನು ಜನವರಿಯಲ್ಲಿ ಹೆಚ್ಚಿಸುವ ಸಾಧ್ಯತೆಗಳಿದೆ ಎಂದು ಮಾರುತಿ ಸುಜುಕಿಯ ಅಧಿಕಾರಿಗಳು ಡಿಸೆಂಬರ್‌ನಲ್ಲೇ ತಿಳಿಸಿದ್ದರು.