Advertisement

ಹೈಬ್ರಿಡ್‌ ವಾಹನ ತಯಾರಿಕೆಗೆ ಮಾರುತಿ ಸುಜುಕಿ ಸಿದ್ಧ

07:37 PM Jul 03, 2022 | Team Udayavani |

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಇನ್ನು ಐದರಿಂದ ಏಳು ವರ್ಷಗಳಲ್ಲಿ ತಮ್ಮ ಸಂಸ್ಥೆಯ ಎಲ್ಲ ಮಾಡೆಲ್‌ಗ‌ಳಲ್ಲಿ ಹೈಬ್ರಿಡ್‌ ವೇರಿಯೆಂಟ್‌ಗಳನ್ನು ಅಳವಡಿಸಲಿದೆ.

Advertisement

ಬ್ಯಾಟರಿ ಆಧಾರಿತ ಎಲೆಕ್ಟ್ರಿಕ್‌, ಸಿಎನ್‌ಜಿ ಎರಡರಲ್ಲೂ ಚಲಿಸಬಲ್ಲ ವಾಹನ ತಯಾರಿಸಲಾಗುವುದು. ಅದರ ಜತೆ ವಿಶೇಷವಾಗಿ ಎಥನಾಲ್‌ ಮತ್ತು ಜೈವಿಕ ಸಿಎನ್‌ಜಿ ಬಳಸಿಕೊಂಡು ಸಂಚರಿಸಬಲ್ಲ ವಾಹನಗಳನ್ನು ತಯಾರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಸಿ.ವಿ.ರಮಣ್‌ ತಿಳಿಸಿದ್ದಾರೆ.

ಗುರುಗ್ರಾಮದಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿರುವ ಮಾರುತಿ ಸುಜುಕಿ ಉತ್ಪಾದನಾ ಕೇಂದ್ರವನ್ನು ಹರ್ಯಾಣ ಸರ್ಕಾರಕ್ಕೆ ಸ್ಥಳಾಂತರಿಸಲಾಗುವುದು.

ಹೊಸ ಮಾದರಿಯ ವಾಹನಗಳ ಉತ್ಪಾದನೆಯ ಉದ್ದೇಶಕ್ಕಾಗಿ 18,000 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಜತೆಗೆ ಸ್ಥಳೀಯರಿಗೆ ಶೇ.75 ಉದ್ಯೋಗಗಳನ್ನು ಮೀಸಲಾಗಿಯೂ ಇರಿಸಿದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next