ಬೆಂಗಳೂರು: ದೇಶದ ಖ್ಯಾತ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿ., ಆಯೋಜಿಸುವ ವಾರ್ಷಿಕ ದಕ್ಷಿಣ ಭಾರತದ ಮೋಟಾರ್ ನ್ಪೋರ್ಟ್ಸ್ “ಮಾರುತಿ ಸುಜುಕಿ ದಕ್ಷಿಣ್ ಡೇರ್-2017′ ಕಾರ್ ರ್ಯಾಲಿಗೆ ಇತೀ¤ಚೆಗೆ ಚಾಲನೆ ನೀಡಲಾಯಿತು.
ನಗರದ ಓರಾಯನ್ ಮಾಲ್‌ನಿಂದ ಭಾನುವಾರ ಹೊರಟ ರ್ಯಾಲಿಯಲ್ಲಿ 180ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. ಈ ರ್ಯಾಲಿ ದಕ್ಷಿಣ ಭಾರತದ ಸಾಹಸಿ ಭೂ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟದ ಗುಡ್ಡಗಾಡು ಪ್ರದೇಶದಲ್ಲೂ ಸಾಗಲಿದೆ. ಚಿತ್ರದುರ್ಗ, ಬೆಳಗಾವಿ, ಕೊಲ್ಹಾಪುರ ಮುಂತಾದ ಪ್ರದೇಶಗಳ ಮೂಲಕ ಸಾಗಿ ಜು.22 ರಂದು ಪುಣೆಯಲ್ಲಿ ಅಂತ್ಯವಾಗಲಿದೆ.
ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಮಾರುತಿ ಸುಜುಕಿ (ಇಂಡಿಯಾ) ಲಿ., ದಕ್ಷಿಣ ಭಾಗದ ವಾಣಿಜ್ಯ ವಹಿವಾಟು ಮುಖ್ಯಸ್ಥ ಆನಂದ್ ಪ್ರಕಾಶ್, ಇಂತಹ ಪ್ರೋತ್ಸಾಹಕರ ಪ್ರತಿಕ್ರಿಯೆಯೊಂದಿಗೆ ಪ್ರತಿ ವರ್ಷ ಸ್ವಾಗತ ಪಡೆಯುವುದು ಅದ್ಭುತ ಅನುಭವ ಎನಿಸಿದೆ. ಕಳೆದ ಬಾರಿ ನೂತನ ಟೆಸ್ಟ್ ಟ್ರಾಕ್‌ಗಳನ್ನು ನಾವು ಪರಿಚಯಿಸಿದ್ದು, ರ್ಯಾಲಿಯನ್ನು ಗಡಿಗಳಾಚೆಗೆ ಒಯ್ಯಲಾಗುತ್ತಿದೆ. ದಕ್ಷಿಣದ ಭೂಪ್ರದೇಶಗಳಲ್ಲಿ ಎದುರಿಸಬೇಕಾದ ಸವಾಲುಗಳ ಜೊತೆ ಪಶ್ಚಿಮದ ಭೂಪ್ರದೇಶಗಳಲ್ಲಿ ಸ್ಪರ್ಧಿಗಳ ಪೈಪೋಟಿ ವೀಕ್ಷಿಸಲೇಬೇಕಾದ ಸಂಗತಿಯಾಗಿದೆ.
ಮೂರು ವಿಭಾಗದ ರ್ಯಾಲಿ: ರ್ಯಾಲಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಎಂಡ್ನೂರೆನ್ಸ್ , ಅಲ್ಟಿಮೇಟ್ ಕಾರ್ ಮತ್ತು ಅಲ್ಟಿಮೇಟ್ ಬೈಕ್ ಆರು ದಿನಗಳಲ್ಲಿ ಸುಮಾರು 2000 ಕಿ.ಮೀ. ದೂರ ಕ್ರಮಿಸಲಿವೆ. ದಕ್ಷಿಣ್ ಡೇರ್‌ನಲ್ಲಿ ಟೀಮ್ ಮಾರುತಿ ಸುಜುಕಿ ತಂಡದ ರಾಣಾ ಹಾಗೂ ಅಶ್ವಿನ್ ನಾಯಕ್ ಅವರು ಗ್ರಾಂಡ್ ವಿಟಾರವನ್ನು ಚಲಾಯಿಸಲಿದ್ದಾರೆ. ಇವರು ಕಳೆದ ವರ್ಷದ ಆವೃತ್ತಿಯ ವಿಜೇತರಾಗಿದ್ದರು.
ಸಂದೀಪ್ ಶರ್ಮ ಮತ್ತು ಕರುಣ್ ಆರ್ಯ ಅವರು ಮಾರುತಿ ಸುಜುಕಿ ಜಿಪ್ಸಿ ವಾಹನವನ್ನು ಅಲ್ಟಿಮೇಟ್ ಕಾರ್ ವಿಭಾಗದಲ್ಲಿ ಚಲಾಯಿಸಲಿದ್ದಾರೆ. ವಿಟಾರ ಬ್ರೆಜ್ಜಾ ವಾಹನವನ್ನು ಜಗ್‌ಮಿತ್ ಗಿಲ್ ಹಾಗೂ ಚಂದನ್ ಸೇನ್ ಅವರು ಚಲಾಯಿಸುತ್ತಿದ್ದು ಇವರಿಬ್ಬರೂ ಎಂಡ್ನೂರೆನ್ಸ್ ಕಾರ್ ವಿಭಾಗದಲ್ಲಿ, ಎಸ್-ಕ್ರಾಸ್ ವಾಹನವನ್ನು ಚಲಾಯಿಸುತ್ತಿರುವ ಕಾರ್ತಿಕ್ ಮಾರುತಿ ಮತ್ತು ಶಂಕರ್ ಆನಂದ್ ಅವರಿಗೆ ಕಠಿಣ ಪೈಪೋಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.