Advertisement

ಮಾರುತಿ ಸುಜುಕಿ ಇಂಡಿಯಾದಿಂದ ಹೊಸ ಮಾರುತಿ ಇಕೋ ವ್ಯಾನ್‌ ಬಿಡುಗಡೆ

06:43 PM Nov 22, 2022 | Team Udayavani |

ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಕೋ ವ್ಯಾನ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Advertisement

5, 7 ಸೀಟ್‌ಗಳ, ಕಾರ್ಗೋ, ಟೂರ್‌ ಮತ್ತು ಆ್ಯಂಬ್ಯುಲೆನ್ಸ್‌ ಸೇರಿದಂತೆ ಒಟ್ಟು 13 ಮಾದರಿಗಳಲ್ಲಿ ಹೊಸ ಆವೃತ್ತಿ ಲಭ್ಯವಾಗಲಿದೆ. ಪೆಟ್ರೋಲ್‌ ಮತ್ತು ಸಿಎನ್‌ಜಿ ವರ್ಶನ್‌ಗಳೂ ಲಭ್ಯವಾಗಲಿವೆ.

ಹೊಸ ಮಾದರಿಯಲ್ಲಿ 1.2 ಲೀಟರ್‌ನ ಕೆ ಸೀರಿಸ್‌ನ ಡ್ಯುಯಲ್‌ ಜೆಟ್‌ ಪೆಟ್ರೋಲ್‌ ಎಂಜಿನ್‌ ಇದೆ. ಹಿಂದಿನ ಆವೃತ್ತಿಗೆ ಹೋಲಿಕೆ ಮಾಡಿದರೆ ಹೊಸ ಎಂಜಿನ್‌ ಶೇ.10ರಷ್ಟು ಹೆಚ್ಚು ಶಕ್ತಿಯುತವಾಗಿದೆ.

ಪ್ರತಿ ಲೀಟರ್‌ಗೆ ಅದು 20.20 ಕಿಮೀ ಮೈಲೇಜ್‌ ನೀಡುತ್ತದೆ. ಅದರ ಬೆಲೆ ಎಕ್ಸ್‌ಶೋರೂಮ್‌ 5.10 ಲಕ್ಷ ರೂ.ಗಳಿಂದ 8.13 ಲಕ್ಷ ರೂ. ಇರಲಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next