ಹೊಸದಿಲ್ಲಿ: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನ ಹಿಂಬದಿಯ ಸೀಟ್ ಬೆಲ್ಟ್ ನಲ್ಲಿ ಸಂಭವನೀಯ ದೋಷವನ್ನು ಸರಿಪಡಿಸಲು ಕಂಪೆನಿ ಮುಂದಾಗಿದೆ.
ಇದಕ್ಕಾಗಿ 2022ರ ಆ.8ರಿಂದ ನ.15 ರವರೆಗೆ ತಯಾರಾದ 11,177 ಕಾರುಗಳನ್ನು ಕಂಪೆನಿಯ ಅಧಿಕೃತ ಸರ್ವೀಸ್ ಸೆಂಟರ್‌ಗೆ ತರಿಸಿ ದೋಷ ಸರಿಪಡಿಸಲು ಮಾರುತಿ ಸುಜುಕಿ ನಿರ್ಧರಿಸಿದೆ.
“ಇದಕ್ಕಾಗಿ ನಾವು ಕಾರಿನ ಮಾಲಕರಿಗೆ ಕರೆ ಮಾಡಲಿದ್ದೇವೆ. ಕಂಪೆನಿಯ ಅಧಿಕೃತ ಡೀಲರ್‌ನ ವರ್ಕ್‌ಶಾಪ್‌ನಲ್ಲಿ ಕಾರಿನ ಹಿಂಬದಿಯ ಸೀಟ್ ಬೆಲ್ಟ್ ಪರಿಶೀಲಿಸಿ, ದೋಷ ಸರಿಪಡಿಸಲಿದ್ದೇವೆ. ಈ ಸೇವೆಯು ಸಂಪೂರ್ಣ ಉಚಿತವಾಗಿದೆ. ಸೀಟ್ ಬೆಲ್ಟ್ನ ದೀರ್ಘಾವಧಿ ಕಾರ್ಯ ನಿರ್ವಹಣೆಯ ತೊಂದರೆಯನ್ನು ಸರಿಪಡಿಸಲು ಈ ಕ್ರಮ ಕೈಗೊಂಡಿದ್ದೇವೆ,’ ಎಂದು ಮಾರುತಿ ಸುಜುಕಿ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯ ರಾಜಕೀಯಕ್ಕೆ ಬರಲು ತೀರ್ಮಾನಿಸಿಲ್ಲ: ಸಂಸದೆ ಸುಮಲತಾ