Advertisement

ಡೀಸೆಲ್‌ ಕಾರ್‌ಗೆ ಮಾರುತಿ ವಿದಾಯ?

11:19 AM Oct 02, 2021 | |

ಹೊಸದಿಲ್ಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಡೀಸೆಲ್‌ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

Advertisement

ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. ಡೀಸೆಲ್‌ ಬದಲಾಗಿ ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ಎಂಜಿನ್‌ ಕಾರುಗಳಿಗೇ ಹೆಚ್ಚು ಒತ್ತು ನೀಡಲಿದೆ.

ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಗಾಗಿಯೇ 1.5 ಲೀಟರ್‌ ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಆವಿಷ್ಕರಿಸಲೂ ಮುಂದಾಗಿತ್ತು. ಅದನ್ನು ಕೈಬಿಡಲಾಗಿದೆ.

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಾರುತಿ 50 ಲಕ್ಷ ಸಿಎನ್‌ಜಿ ಆಧರಿತ ವಾಹನಗಳನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿದೆ. ಸದ್ಯ ಶೇ.16ರಷ್ಟು ವಾಹನಗಳು ಮಾರುಕಟ್ಟೆಯಲ್ಲಿವೆ.

ಇದನ್ನೂ ಓದಿ:ಕೊಲೊಂಬೊ ಬಂದರಿನಲ್ಲಿ ಅದಾನಿ ಗ್ರೂಪ್‌ನ 5 ಸಾವಿರ ಕೋಟಿ ರೂ. ಹೂಡಿಕೆ

Advertisement

ಇದರ ಜತೆಗೆ ಹೈಬ್ರಿಡ್‌, ಇಂಧನ ಆಯ್ಕೆಯ ಎಂಜಿನ್‌ ಇರುವ ಕಾರುಗಳನ್ನೂ ಉತ್ಪಾದಿಸಿ ಮಾರು ಕಟ್ಟೆಗೆ ಬಿಡುಗಡೆ ಮಾಡುವ ಇರಾದೆಯೂ ಕಂಪೆನಿಗೆ ಇದೆ.

ಪರಿಸರ ನಿಯಂತ್ರಣ ನಿಯಮ ಬಿಎಸ್‌-6ರ ಎರಡನೇ ಆವೃತ್ತಿಯ ಮಾನದಂಡಗಳು 2022-23ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next