ಮಾರುತಿ ಸುಜುಕಿ ಕಂಪನಿಯು ಮಾರುತಿ ಬ್ರೆಜ್ಜಾ ಸಿಎನ್‌ಜಿ ಬಿಡುಗಡೆಗೊಳಿಸಿದ್ದು, ಆರಂಭಿಕ ಎಕ್ಸ್ ಶೋರೂಮ್ ಬೆಲೆ 9.14 ಲಕ್ಷ ರೂ. ಇದೆ. ಎಸ್‌ಯುವಿ ಮಾದರಿಯಲ್ಲಿ ಸಿಎನ್‌ಜಿ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಬ್ರೆಜ್ಜಾ ಸಿಎನ್‌ಜಿ ಆಗಿದೆ.
ಒಂದು ಕಿಲೋ ಸಿಎನ್‌ಜಿ ಗೆ 25.51 ಕಿ.ಮೀ. ಮೈಲೇಜ್ ಬರಲಿದೆ. ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಜೆಡ್‌ಎಕ್ಸ್‌ಐ ಮತ್ತು ಜೆಡ್‌ಎಕ್ಸ್‌ಐ ಡ್ನೂಯಲ್ ಟೋನ್ ವೇರಿಯಂಟ್‌ಗಳಲ್ಲಿ ಕಾರು ಲಭ್ಯವಿದೆ. 1.5 ಲೀ. ಡ್ನೂಯಲ್ ಜೆಟ್, ಡ್ನೂಯಲ್ ವಿವಿಟಿ ಎಂಜಿನ್ ಹೊಂದಿದೆ.
ಟಾಪ್ ವೇರಿಯಂಟ್‌ನಲ್ಲಿ ಎಲೆಕ್ಟ್ರಾನಿಕ್ ಸನ್‌ರೂಫ್, ಕೀಲೆಸ್ ಪುಶ್ ಸ್ಟಾರ್ಟ್ ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.