Advertisement

dakshina kannada; ಮಂಗಳೂರು- ಮರುಸಾಗರ್‌ ಎಕ್ಸ್‌ಪ್ರೆಸ್‌ಗೆ ದಿವ್ಯಾಂಗ ಸ್ನೇಹಿ ಬೋಗಿ

09:57 AM May 26, 2023 | Team Udayavani |

ಮಂಗಳೂರು: ನಂ. 12978 ಅಜ್ಮೀರ್-ಎರ್ನಾಕುಲಂ ಜಂಕ್ಷನ್‌ ಸಾಪ್ತಾಹಿಕ ಮರುಸಾಗರ್‌ ಎಕ್ಸ್‌ ಪ್ರಸ್‌ (ಶುಕ್ರವಾರ ಸೇವೆ‌)ಗೆ ಜನರೇಟರ್‌ ಕಾರ್‌ ಬೋಗಿಗೆ ಬದಲಾಗಿ ಸೆಕೆಂಡ್‌ ಕ್ಲಾಸ್‌ (ದಿವ್ಯಾಂಗ ಸ್ನೇಹಿ) ಕಂ ಲಗೇಜ್‌/ಬ್ರೇಕ್‌ ವ್ಯಾನ್‌ ಕೋಚ್‌ ಅನ್ನು ಮೇ 26ರಿಂದ ಶಾಶ್ವತವಾಗಿ ಅಳವಡಿಸಲಾಗುತ್ತಿದೆ.

Advertisement

ನಂ. 12977 ಎರ್ನಾಕುಲಂ ಜಂಕ್ಷನ್‌-ಅಜ್ಮೀರ್ ಸಾಪ್ತಾಹಿಕ ಮರುಸಾಗರ್‌ ಎಕ್ಸ್‌ಪ್ರೆಸ್‌ (ರವಿವಾರ ಸೇವೆ)ಗೆ ಜನರೇಟರ್‌ ಕಾರ್‌ ಕೋಚ್‌ ಬದಲಿಗೆ ಸೆಕೆಂಡ್‌ ಕ್ಲಾಸ್‌ (ದಿವ್ಯಾಂಗ ಸ್ನೇಹಿ) ಕಂ ಲಗೇಜ್‌/ ಬ್ರೇಕ್‌ ವ್ಯಾನ್‌ ಕೋಚ್‌ ಶಾಶ್ವತವಾಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

ತಿರುನೆಲ್ವೇಲಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕ ಸ್ಲಿಪರ್‌ ಕೋಚ್‌
ಮಂಗಳೂರು, ಮೇ 25: ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಮೇ 26 ಮತ್ತು 27ರಂದು ಪ್ರಯಾಣ ಬೆಳೆಸಲಿರುವ ನಂ. 19578 ಜಾಮ್ನಗರ್‌-ತಿರುನೆಲ್ವೇಲಿ ಎಕ್ಸ್‌ಪ್ರೆಸ್‌ಗೆ ಹಾಗೂ ಮೇ 29 ಮತ್ತು 30ರಂದು ಪ್ರಯಾಣಿಸಲಿರುವ ನಂ. 19577 ತಿರುನೆಲ್ವೇಲಿ-ಜಾಮ್ನಗರ್‌ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ತಲಾ ಒಂದರಂತೆ ಸ್ಲಿಪರ್‌ ಕೋಚ್‌ ಸೇರ್ಪಡೆಗೊಳಿಸಲಾಗುತ್ತದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next