Advertisement

Amrita Sarovar: ಅಮೃತ ಸರೋವರದ ಬಳಿ ಹುತಾತ್ಮರ ಸ್ಮಾರಕ 

04:03 PM Aug 15, 2023 | Team Udayavani |

ದೇವನಹಳ್ಳಿ: 77ನೇ ಸಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಬೆಂಗಳೂ ರು ಗ್ರಾಮಾಂತರ ಜಿಪಂ, ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ ಅಮೃತ ಸರೋವರ ಅಂಗಳದಲ್ಲಿ ಹುತಾತ್ಮರ ಸ್ಮಾರಕದ ಶಿಲಾಫ‌ಲಕ ನಿರ್ಮಾಣಕ್ಕೆ ನಿರ್ಧರಿಸಲಾ ಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಬೆಂ.ಗ್ರಾಮಾಂತರ ಜಿಲ್ಲೆಯ 155 ಜಲಮೂಲಗಳನ್ನು ಅಮೃತ ಸರೋವರಗಳಾಗಿ ಅಭಿವೃದ್ಧಿ ಪಡಿಸುವ ಗುರಿ ಯಲ್ಲಿ 104 ಅಮೃತ ಸರೋವರ ಕೆರೆಗಳ ಕಾಮಗಾರಿ ಪೂರ್ಣಗೊಂಡಿವೆ, ದೇವನಹಳ್ಳಿ ತಾಲೂಕಿನಲ್ಲಿ 25, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 29, ಹೊಸಕೋಟೆ ತಾಲೂಕಿನಲ್ಲಿ 30, ನೆಲಮಂಗಲ ತಾಲೂಕಿನಲ್ಲಿ 20 ಅಮೃತ ಸರೋವರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 101 ಗ್ರಾಮ ಪಂಚಾಯಿತಿಗಳ ವಿಶಿಷ್ಟ ಸ್ಮಾರಕ ಅನಾವರಣ ಗೊಳಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ, ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೀರರ ಹೆಸರನ್ನು ಶಿಲಾ ಫ‌ಲಕದಲ್ಲಿ ಕೆತ್ತನೆ ಮಾಡಿ ಅಮೃತ ಸರೋವರಗಳ ಬಳಿ ಅಳವಡಿಸಲಾಗುತ್ತಿದೆ. ಒಂದು ವೇಳೆ ಗ್ರಾಪಂ ವ್ಯಾಪ್ತಿಯಲ್ಲಿ ವೀರರು ಲಭ್ಯವಿಲ್ಲದ ಕಡೆ ಸಾಮಾನ್ಯ ಸಮರ್ಪಣಾ ಶಿಲಾಫ‌ಲಕ ನಿರ್ಮಿಸಲಾಗುತ್ತಿದೆ.

ವಿನೂತನ ಕಾರ್ಯಕ್ರಮ: ಕೆರೆಗಳ ಸುತ್ತ ತಿರಂಗಾ ಯಾತ್ರೆ ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯೋತ್ಸವ ವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅಮೃತ ಸರೋವರ ಕೆರೆ ದಂಡೆಯ ಮೇಲೆ ಗ್ರಾಮಸ್ಥರಿಗೆ ನಾನಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಮೊದಲಿಗೆ ತಿರಂಗಾ ಯಾತ್ರೆಯನ್ನು ಗ್ರಾಮದ ಸಮುದಾಯದವರೊಂದಿಗೆ ಬೆಳಗ್ಗೆ ಗ್ರಾಮಾದ್ಯಂತ ನಡೆಸಿ, ಅಮೃತಸರೋವರದ ಬಳಿ ಮುಕ್ತಾಯಗೊಳಿಸಲಾಗುತ್ತಿದೆ. ಬಳಿಕ ಅರಣ್ಯೀಕರಣ ಕೈಗೊಂಡ ಅಮೃತ ಸರೋವರ ಬಳಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ , ಸುಸ್ಥಿರತೆಗೆ ಪಣತೊಡಲಾಗುತ್ತದೆ.

 ಸ್ವಚ್ಛತಾ ಪ್ರತಿಜ್ಞೆ: ಸ್ವಚ್ಛತಾ ಪ್ರತಿಜ್ಞೆ ಅಮೃತ ಸರೋವರ ಕೆರೆ ಅಂಗಳದಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಅಮೃತ ಸರೋವರ ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಮತ್ತು ನೀರಿನ ಮಾಲಿನ್ಯ ತಡೆಗಟ್ಟುವ ಜವಾಬ್ದಾರಿಯ ಸ್ವತ್ಛತಾ ಪ್ರತಿಜ್ಞೆ ಕೈಗೊಳ್ಳುವುದು.

Advertisement

ಮಕ್ಕಳಿಗೆ ವಿವಿಧ ಸ್ಪರ್ಧೆಗಳು: ಅಮೃತ ಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆಗಳು, ಪ್ರಬಂಧ ಬರೆಯುವುದು, ರಂಗೋಲಿ, ಭಾಷಣ ಇತ್ಯಾದಿ ಸೇರಿದಂತೆ ಸ್ಪರ್ಧಾತ್ಮಕ ಚಟುವಟಿಕೆ ಆಯೋಜಿಸುವುದು. ಸಾಂಪ್ರ ದಾಯಿಕ ಗ್ರಾಮೀಣ ಆಟಗಳನ್ನು ಆಯೋಜಿಸಿ ಜಾನಪದ ಸಂಗೀತ, ನೃತ್ಯ, ಹಾಗೂ ಗ್ರಾಮೀಣ ಆಟಗಳಾದ ಖೋ-ಖೋ, ಲಗೋರಿ, ಹಗ್ಗ ಜಗ್ಗಾಟ, ಹಗ್ಗ ಜಿಗಿತ, ಕುಂಟ ಓಟ, ಕುರ್ಚಿ ಓಟ  ಆಯೋಜಿಸಲಾಗಿದೆ.

ಪ್ರಚಾರಕ್ಕೆ ಹ್ಯಾಶ್‌ ಟ್ಯಾಗ್‌ ಬಳಕೆ:  ಮೇರಾ ಅಮೃತ ಸರೋವರ ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಕಾರ್ಯಕ್ರಮದ ಚಿತ್ರಗಳನ್ನು ಜಾಲತಾಣದಲ್ಲಿ ಅಪ್ಲೋಡ್‌ ಮಾಡಲು ಮತ್ತು ಅಮೃತ ಸರೋವರ ನೀರಿನ ಬಳಕೆ ಸುತ್ತಲಿನ ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಗುಂಪಿಗೆ ಹಕ್ಕುಗಳ ಪ್ರಮಾಣ ಪತ್ರ ವಿತರಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ಅಮೃತ ಸರೋವರಗಳ ನಿರ್ಮಾಣವನ್ನು ಗುರುತಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ನೀಡಲು ಜಿಲ್ಲಾ ಪಂಚಾಯತ್‌ ನಿಂದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದಾರೆ.

Advertisement

Udayavani is now on Telegram. Click here to join our channel and stay updated with the latest news.

Next