Advertisement

ಮಂಗಳನಲ್ಲಿ ನೀರು: ಮತ್ತೊಂದು ಸಾಕ್ಷ್ಯ

12:23 AM Feb 12, 2023 | Team Udayavani |

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿದ್ದ ಸರೋವರದ ಅಲೆಗಳೇ ಕಲ್ಲುಗಳಾಗಿ ಮಾರ್ಪಾಡಾಗಿರುವ ಚಿತ್ರವನ್ನು ನಾಸಾದ ರೋವರ್‌ ಒಂದು ಸೆರೆ ಹಿಡಿದಿದೆ. ಈ ಮೂಲಕ ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು ಎನ್ನುವ ವಾದಗಳಿಗೆ ಮತ್ತೊಂದು ಪುಷ್ಟಿ ಸಿಕ್ಕಿದಂತಾಗಿದೆ.

Advertisement

ಮಂಗಳನಲ್ಲಿ ಸಂಚರಿಸುತ್ತಿರುವ ನಾಸಾದ “ಕ್ಯೂರಿಯಾಸಿಟಿ ರೋವರ್‌’, “ಸಲ್ಫೆಟ್‌-ಬಿಯರಿಂಗ್‌ ಯೂನಿಟ್‌’ ಎನ್ನುವ ಪ್ರದೇಶದಲ್ಲಿ ಸಂಚರಿಸುತ್ತಿರುವ ವೇಳೆ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಇದು ಪರ್ವತ ಸಾಲಿನಲ್ಲಿರುವ ಪ್ರದೇಶವಾಗಿದ್ದು,ಚಿತ್ರಗಳು ಆ ಪ್ರದೇಶದಲ್ಲಿ ಪುರಾತನ ಸರೋವರವಿತ್ತು ಎನ್ನುವುದಕ್ಕೆ ಪುರಾವೆ ಒದಗಿಸಿವೆ. ತೀರಾ ಆಳವಿಲ್ಲದ ಸಮುದ್ರ ಕಾಲಾಂತರದಲ್ಲಿ ಒಣಗಿ ಹೋಗಿದ್ದು, ಬಳಿಕ ಅಲೆಗಳೇ ಬಂಡೆಗಳಾಗಿ ಮಾರ್ಪಾಡಾಗಿವೆ ಎಂದು ನಾಸಾ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next