Advertisement

ಇಂದು ಭೂಮಿಯ ಸನಿಹಕ್ಕೆ ಮಂಗಳ ಗ್ರಹ

11:37 PM Dec 07, 2022 | Team Udayavani |

ಡಿಸೆಂಬರ್‌ 8ರಂದು ಭೂಮಿಯ ಹತ್ತಿರ ಬರಲಿರುವ ಮಂಗಳ ಗ್ರಹ, ಆಕಾಶ ವೀಕ್ಷಕರಿಗೆ ಇತರ ಆಕರ್ಷ ಣೆಗಳ ಜತೆಗೆ ತನ್ನ ಇರವನ್ನು ಸಾರುತ್ತಾನೆ. ಅಂದು ಸೂರ್ಯಾಸ್ತವಾಗುವ ಸಮಯದಲ್ಲಿ ಪೂರ್ವಾಗಸ ದಲ್ಲಿ ಮೂಡುವ ಮಂಗಳ ಗ್ರಹವು ರಾತ್ರಿಯಿಡೀ ತಾಮ್ರ ವರ್ಣದೊಂದಿಗೆ ಸ್ವಲ್ಪ ದೊಡ್ಡದಾಗಿ ಕಾಣುತ್ತಿರುತ್ತದೆ.

Advertisement

ಈ ವಿದ್ಯಮಾನ ಸುಮಾರು 26 ತಿಂಗಳಿಗೊಮ್ಮೆ ಜರಗುತ್ತದೆ. ಎಲ್ಲ ಗ್ರಹಗಳಂತೆ ನಮ್ಮ ನೆರೆಯ ಮಂಗಳ ಗ್ರಹವೂ ಸೂರ್ಯನನ್ನು ಸುತ್ತುತ್ತಿದ್ದು ನಮ್ಮ ಭೂ ಕಕ್ಷೆಯಿಂದ ಹೊರಗೆ ಸೂರ್ಯನಿಂದ ದೂರದಲ್ಲಿ ದೀರ್ಘ‌ ವೃತ್ತಾಕಾರದ ತನ್ನದೇ ಕಕ್ಷೆಯಲ್ಲಿ ನಿಧಾನವಾಗಿ ಸಾಗುತ್ತಿದೆ. ಭೂಮಿ ಸೂರ್ಯನ ಸಮೀಪವಿರು ವುದರಿಂದ ವೇಗವಾಗಿ ಸಾಗುತ್ತಿದೆ. ಭೂಮಿ ಸುಮಾರು ಎರಡು ಸುತ್ತು ಸೂರ್ಯನ ಸುತ್ತ ಪೂರೈಸಿದಾಗ ಮಂಗಳ ತನ್ನ ಕಕ್ಷೆಯಲ್ಲಿ ಒಂದೇ ಸುತ್ತು ಸುತ್ತುತ್ತದೆ. ಹೀಗಾಗಿ ಎರಡೂ ಗ್ರಹಗಳು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಕೆಲವೊಮ್ಮೆ ಹತ್ತಿರವಿರುತ್ತವೆ. ಭೂಮಿಯಿಂದ ನೋಡಿದಾಗ ಒಂದು ದಿಕ್ಕಿನಲ್ಲಿ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಮಂಗಳ ಕಂಡು ಬರುವುದನ್ನು ವಿಯುತಿ (opposition) ಎಂದು ಕರೆಯುತ್ತಾರೆ. ಆಗ ಮಂಗಳ ಭೂಮಿಯ ಸನಿಹದಲ್ಲಿ ರುವುದರಿಂದ ಸ್ವಲ್ಪ ದೊಡ್ಡದಾಗಿ ಕಂಡು ಬರುತ್ತಾನೆ.

ಮಂಗಳನ ಬಗೆಗೇಕೆ ಕುತೂಹಲ ?
ಪ್ರಾಚೀನ ಕಾಲದಿಂದಲೂ ಮಂಗಳನ ಕೆಂಪು ಬಣ್ಣದ ಬಗ್ಗೆ ಕುತೂಹಲ ಮತ್ತು ಭಯವೂ ಇತ್ತು. ಮಂಗಳನೆಂದರೆ ಯುದ್ಧದ ಮುನ್ಸೂಚನೆ ಹಾಗಾಗಿ ಅಶುಭ ಎಂಬ ನಂಬಿಕೆಯಿತ್ತು. ಈ ಕೆಂಪು ಬಣ್ಣ ಮಂಗಳನ ಮೇಲ್ಮೆ„ಯ ಕಬ್ಬಿಣದ ಆಕ್ಸೆ„ಡ್‌ನಿಂದ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಈಗ ವಾಸಕ್ಕೆ ನಮಗಿರುವುದು ಭೂಮಿಯೊಂದೇ ಇನ್ನುಳಿದಂತೆ ಭೂಮಿಯ ಉಪಗ್ರಹ ಚಂದ್ರನಾಗಲಿ ಅಥವಾ ಮಂಗಳ ಗ್ರಹವಾಗಲಿ ಬದಲಿ ವಾಸಕ್ಕೆ ಯೋಗ್ಯವೇ? ನಮ್ಮ ವಸಾಹತನ್ನು ಮಂಗಳನ ಅಂಗಳಕ್ಕೆ ವಿಸ್ತರಿಸಬಹುದೇ ಎಂಬುದನ್ನು ಶೋಧಿಸಲು ತಂತ್ರಜ್ಞಾನಗಳ ಮೂಲಕ ಮಂಗಳನಲ್ಲಿಗೆ ಉಪಗ್ರಹ ಗಳನ್ನು ಕಳುಹಿಸಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಭಾರತವೂ ಮಂಗಳಾನ್ವೇಷಣೆಯಲ್ಲಿ ತೊಡಗಿದೆ.

ಮಂಗಳನ ವೀಕ್ಷಣೆಗೆ ವ್ಯವಸ್ಥೆ
ಡಿಸೆಂಬರ್‌ 8ರಂದು ಸಂಜೆ ಗಂಟೆ 7ರಿಂದ ಮಂಗಳ ಭೂಮಿಯ ಹತ್ತಿರಕ್ಕೆ ಬರುವ ವಿದ್ಯಮಾನ ವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಮಂಗಳೂರಿನ ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಿತ ನಾಡಿನ ಪ್ರಮುಖ ವಿಜ್ಞಾನ ಮತ್ತು ಖಗೋಳ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಡಿಸೆಂಬರ್‌ ತಿಂಗಳಲ್ಲಿ ಕಂಡು ಬರುವ ಆಕಾಶಕಾಯಗಳಾದ ಗುರು ಮತ್ತು ಶನಿ ಗ್ರಹ ಹಾಗೂ ಹುಣ್ಣಿಮೆ ಚಂದ್ರನನ್ನು ಸಹ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಜತೆಯಲ್ಲಿ ನಕ್ಷತ್ರ ಪುಂಜಗಳನ್ನೂ ಪರಿಚಯಿಸಿಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

Advertisement

ಮಂಗಳ ಗ್ರಹದ
ಕುತೂಹಲಕಾರಿ ಮಾಹಿತಿಗಳು
1. ಸೂರ್ಯನಿಂದ ನಾಲ್ಕನೇ ಗ್ರಹ.
2. ಸೌರವ್ಯೂಹದಲ್ಲಿ ಎರಡನೇ ಚಿಕ್ಕ ಗ್ರಹ (ಮೊದಲನೆಯದು ಬುಧ).
3. ಮಂಗಳ ಗ್ರಹವನ್ನು ಕುಜ ಅಥವಾ ಅಂಗಾರಕ ಎಂದೂ ಕರೆಯುತ್ತಾರೆ.
4. ಮಂಗಳ ಗ್ರಹವು ತನ್ನ ಅಕ್ಷದ ಸುತ್ತ ಸುತ್ತಲು ಸುಮಾರು 24 ಗಂಟೆ 36 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
5. ಮಂಗಳ ಗ್ರಹದ ಅಕ್ಷದ ಓರೆಯು ಭೂಮಿಯನ್ನು ಹೋಲುತ್ತದೆ. ಅದರ ಕಕ್ಷೆಯ ಸಮತಲಕ್ಕೆ ಸುಮಾರು 25 ಡಿಗ್ರಿ ವಾಲಿದೆ ಹಾಗಾಗಿ ಭೂಮಿಯಂತೆ ಮಂಗಳ ಗ್ರಹದಲ್ಲೂ ಋತುಮಾನಗಳು ಉಂಟಾಗುತ್ತವೆ.
6. ಮಂಗಳವು ಸೂರ್ಯನ ಸುತ್ತ ಸುತ್ತಲು ಸುಮಾರು 687 ಭೂದಿನಗಳನ್ನು ತೆಗೆದುಕೊಳ್ಳುತ್ತದೆ.
7. ಮಂಗಳ ಗ್ರಹದ ಮೇಲ್ಮೈ ಕಬ್ಬಿಣದ ಆಕ್ಸೈಡ್ ನಿಂದ ತುಂಬಿರುವ ಕಾರಣ ಕೆಂಪು ಗ್ರಹ (ರೆಡ್‌ ಪ್ಲಾನೆಟ್‌) ಎಂದು ಕರೆಯುತ್ತಾರೆ.
8. ಫೋಬೋಸ್‌ ಮತ್ತು ಡೀಮೋಸ್‌ ಮಂಗಳದ 2 ಉಪಗ್ರಹಗಳು
9. ಮಂಗಳ ಗ್ರಹವು ಇಂಗಾಲದ ಡೈ ಆಕ್ಸೆ„ಡ್‌ ನ ತೆಳುವಾದ ವಾತಾವರಣವನ್ನು ಹೊಂದಿದೆ.
10. ಮಂಗಳನ ಮೇಲ್ಮೈ ಯಲ್ಲಿ ಗುರುತ್ವಾ ಕರ್ಷಣೆಯು ಭೂಮಿಯ ಗುರುತ್ವಾಕ ರ್ಷಣೆಯ ಶೇ. 38 ರಷ್ಟಿದೆ (3.74 ಞ/s2).

– ಡಾ| ಕೆ.ವಿ. ರಾವ್‌ ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next