Advertisement

ಮಾಗಡಿ: ಮನೆಗೆ ನುಗ್ಗಿ ಗೃಹಿಣಿಯ ಮೇಲೆ ಗ್ಯಾಂಗ್‌ರೇಪ್‌ 

12:25 PM Jul 01, 2018 | Team Udayavani |

ಮಾಗಡಿ: ತಾಲೂಕಿನ ಗ್ರಾಮವೊಂದರಲ್ಲಿ ಮೂವರು ಕಾಮುಕರು ಶನಿವಾರ ತಡರಾತ್ರಿ ಮನೆಗೆ ನುಗ್ಗಿ  ಗೃಹಿಣಿಯೊಬ್ಬಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗ್ಯಾಂಗ್‌ ರೇಪ್‌ ಎಸಗಿ ಅಟ್ಟಹಾಸ ಮೆರೆದಿದ್ದಾರೆ. 

Advertisement

ವರದಿಯಾದಂತೆ ಸಂತ್ರಸ್ತ ಮಹಿಳೆಯ ಪತಿಯ ಸ್ನೇಹಿತರೆ ಕೃತ್ಯ ಎಸಗಿದ್ದು , ರಾತ್ರಿ ನಂಬರ್‌ ಕೇಳುವ ನೆಪದಲ್ಲಿ ಬಂದ ಮೂಲರು ಬಾಗಿಲು ತೆಗೆದೊಡನೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. 

ಗಂಭೀರವಾಗಿ ಗಾಯೊಂಡು ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಆರೋಪಿಗಳಾದ ಪುರುಷೋತ್ತಮ, ಮಂಜು ಮತ್ತು ಕರಡಿ ತಲೆ ಮರೆಸಿಕೊಂಡಿದ್ದು , ಮೂವರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next