Advertisement

ಎಲ್ಲ ಲಿವ್‌-ಇನ್‌ ಸಂಬಂಧವೂ ಕೌಟುಂಬಿಕ ಸಂಬಂಧವಲ್ಲ

07:33 PM Feb 20, 2023 | Team Udayavani |

ಅಹಮದಾಬಾದ್‌:ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅಡಿ, ಎಲ್ಲ ಲಿವ್‌-ಇನ್‌ ಸಂಬಂಧಗಳನ್ನೂ (ಸಹ ವಾಸ) ಕೌಟುಂಬಿಕ ಸಂಬಂಧವೆಂದು ಪರಿಗಣಿಸಲಾಗದು. ವಿವಾಹಿತ ಮಹಿಳೆಯು ಬೇರೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದರೆ, ಆಕೆ ಈ ಕಾನೂನಿನ ಪ್ರಕಾರ ಜೀವನಾಂಶ ಪಡೆಯಬಹುದು ಎಂದು ಹೇಳಲಾಗದು. ಹೀಗೆಂದು ಅಹಮದಾಬಾದ್‌ನ ಸೆಷನ್ಸ್‌ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ, ಮಹಿಳೆಯೊಬ್ಬಳು ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ತಾನು ಸಂಬಂಧ ಹೊಂದಿದ್ದ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಕಳುಹಿಸಿಕೊಟ್ಟಿದ್ದ ಸಮನ್ಸ್‌ ಅನ್ನೂ ಕೋರ್ಟ್‌ ವಜಾ ಮಾಡಿದೆ. ಆ ವ್ಯಕ್ತಿಯೊಂದಿಗೆ ಲಿವ್‌ ಇನ್‌ ಸಂಬಂಧ ಹೊಂದುವ ಮೊದಲೇ ಮಹಿಳೆಗೆ ಮದುವೆಯಾಗಿತ್ತು ಎಂಬುದು ಗೊತ್ತಾದ ಹಿನ್ನೆಲೆಯಲ್ಲಿ ಕೋರ್ಟ್‌ ಈ ನಿರ್ಧಾರ ಕೈಗೊಂಡಿದೆ.

ತನ್ನ ಪತಿ, ಅತ್ತೆ ಮತ್ತು ಮೈದುನ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮಹಿಳೆಯೊಬ್ಬಳು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ಸಲ್ಲಿಸಿದ್ದರು. ಅದರಂತೆ, ಮ್ಯಾಜಿಸ್ಟೀರಿಯಲ್‌ ಕೋರ್ಟ್‌ ಮೂವರು ಆರೋಪಿಗಳಿಗೂ ಸಮನ್ಸ್‌ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಸೆಷನ್ಸ್‌ ಕೋರ್ಟ್‌ ಮೊರೆ ಹೋಗಿದ್ದರು. ತನ್ನೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿ ಇರುವ ಮೊದಲೇ ಆಕೆಗೆ ವಿವಾಹವಾಗಿತ್ತು ಎಂದು ಆರೋಪಿ ಪತಿ ಕೋರ್ಟ್‌ಗೆ ಮಾಹಿತಿ ನೀಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next