Advertisement

ಮುತ್ತಿನ ನಗರಿಯಲ್ಲಿ ಮದುವೆ ವಂಚನೆ ಜಾಲ ಬಯಲು

09:20 AM Sep 21, 2017 | |

ಹೈದರಾಬಾದ್‌: ಮುತ್ತಿನ ನಗರಿಯಿಂದ ಅತ್ಯಂತ ಹೇಯ ಅಪರಾಧ ಜಾಲ ಬಯಲಾಗಿದೆ. ಮಹಿಳೆಯರನ್ನು ಮತ್ತು ಅಪ್ರಾಪ್ತ ವಯಸ್ಕರನ್ನು ಮದುವೆಯಾಗುವುದಾಗಿ ವಂಚಿಸುವ ಜಾಲವನ್ನು ಪೊಲೀಸರು ಬಯಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬ್‌, ಕತಾರ್‌, ಒಮಾನ್‌ನ ಶೇಕ್‌ಗಳು, ಮೂವರು ಖಾಜಿಗಳು ಸೇರಿ 20 ಮಂದಿಯನ್ನು ಬಂಧಿಸಲಾಗಿದೆ. ಹೈದರಾಬಾದ್‌ನ ಹಳೆಯ ನಗರ ವ್ಯಾಪ್ತಿಯಲ್ಲಿ ಪ್ರಕರಣ ಬಯಲಾಗಿದೆ. 20 ಮಹಿಳೆಯರು ಮತ್ತು ಅಪ್ರಾಪ್ತರಿಗೆ ಮೋಸ ಮಾಡುವ ಸಂಚು ಈ ಜಾಲದ್ದಾಗಿತ್ತು.

Advertisement

ಅತ್ಯಂತ ಬಡ ಕುಟುಂಬಗಳೇ ಈ ಗ್ಯಾಂಗ್‌ನ ಗುರಿಯಾಗಿದ್ದವು. ವಯಸ್ಸನ್ನು ಆಧರಿಸಿ ಅದ್ಧೂರಿ ಹೊಟೇಲ್‌ಗ‌ಳಲ್ಲಿ ಮಹಿಳೆಯರಿಗೆ ದರ ನಿರ್ಣಯ ಮಾಡಲಾಗುತ್ತಿತ್ತು. ಸುಮಾರು 5 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳ ವರೆಗೆ ನಿಗದಿಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗುವ ನಾಟಕವಾಡಿ ನಂತರ ಅವರನ್ನು ವಿದೇಶಿಯರಿಗೆ ಮಾರಲಾಗುತ್ತಿತ್ತು ಎಂದು ಡಿಸಿಪಿ ವಿ.ಸತ್ಯನಾರಾಯಣ ತಿಳಿಸಿದ್ದಾರೆ. ಬಡ ಕುಟುಂಬಗಳಿಗೆ ಹಣ, ಚಿನ್ನಾಭರಣಗಳ ಆಮಿಷ ಒಡ್ಡಲಾಗುತ್ತಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next