Advertisement

ಲವ್‌ ಜಿಹಾದ್‌ ಪ್ರತಿಭಟನೆಯಿಂದ ರದ್ದಾದ ಮದುವೆ : ಜು.18ರ ಮದುವೆಗೆ ಪ್ರತಿಭಟನೆಯ ಬಿಸಿ

09:10 PM Jul 13, 2021 | Team Udayavani |

ನಾಸಿಕ್‌: ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಮದುವೆಗೆ “ಲವ್‌ ಜಿಹಾದ್‌ ಮದುವೆ’ ಹಣೆಪಟ್ಟಿ ಬಿದ್ದ ಹಿನ್ನೆಲೆಯಲ್ಲಿ ಎರಡೂ ಕಡೆಯವರು ಮದುವೆಯನ್ನು ರದ್ದುಗೊಳಿಸಿದ ಪ್ರಸಂಗ ತಡವಾಗಿ ವರದಿಯಾಗಿದೆ. ವಧುವಿನ ಜಾತಿಗೆ ಸೇರಿದ ಕೆಲವು ಸಂಘಟನೆಗಳು ಮಾಡಿದ ಪ್ರತಿಭಟನೆಯಿಂದಾಗಿ ಜು. 18ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ನಡೆಯಬೇಕಿದ್ದ ಮದುವೆ ನಿಂತು ಹೋಗಿದೆ.

Advertisement

ವಧು ರಸಿಕಾ ಅವರ ತಂದೆ ಪ್ರಸಾದ್‌ ಅಡಗಾಂವ್ಕರ್‌ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗಳು ಹುಟ್ಟಿನಿಂದಲೇ ವಿಕಲಚೇತನಳಾಗಿದ್ದಳು. ಹಾಗಾಗಿ, ಆಕೆಗೆ ಸೂಕ್ತ ವರ ಸಿಕ್ಕಿರಲಿಲ್ಲ. ನಮ್ಮ ಬೇಗುದಿಯನ್ನು ಅರ್ಥ ಮಾಡಿಕೊಂಡ ಆಕೆಯ ಬಾಲ್ಯ ಸ್ನೇಹಿತ ಆಸಿಫ್ ಖಾನ್‌, ಈಕೆಯನ್ನು ಮದುವೆಯಾಗಲು ಒಪ್ಪಿ, ತನ್ನ ಮನೆಯವರನ್ನೂ ಒಪ್ಪಿಸಿದ. ಲಗ್ನಪತ್ರಿಕೆ ಮುದ್ರಣವಾಗಿ ಎಲ್ಲರಿಗೂ ಹಂಚಿದ ನಂತರ, ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದಾಗಿ ಮದುವೆ ರದ್ದಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸಲು ಕೇರಳ ರಾಜ್ಯಪಾಲರಿಂದ ಉಪವಾಸ

ಆದರೆ, ಮೇನಲ್ಲಿ ಈ ಮದುವೆಯನ್ನು ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಾಸಿಕ್‌ನ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾಯಿಸಲಾಗಿದೆ. ಜು. 18ರಂದು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆ ನಡೆಸಲು ತೀರ್ಮಾನಿಸಲಾಗಿತ್ತಷ್ಟೆ. ಮದುವೆ ಮುಗಿಸಿಕೊಂಡು ವಧುವನ್ನು ವರನ ಮನೆಗೆ ಕಳುಹಿಸಲು ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next